
ಕಲಬುರಗಿ,ಆ.8-ನಗರದ ಉಸ್ಮಾನಿಯಾ ಕಾಲೋನಿಯ ಖಾಲಿ ಜಾಗದಲ್ಲಿ ಕುಳಿತು ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.
ಆಜಾದಪುರದ ರಾಣಪ್ಪ ಕೋರೆ (19) ಮತ್ತು ಸೂರ್ಯಕಾಂತ ಮೇಲಿನಕೇರಿ (21) ಎಂಬುವವರನ್ನು ಬಂಧಿಸಲಾಗಿದೆ.
ಉಸ್ಮಾನಿಯಾ ಕಾಲೋನಿಯ ಖಾಲಿ ಜಾಗದಲ್ಲಿ ಕುಳಿತು ಇವರಿಬ್ಬರು ಗಾಂಜಾ ಸೇವಿಸುತ್ತಿದ್ದಾಗ ಗಸ್ತಿನಲ್ಲಿದ್ದ ಎಂ.ಬಿ.ನಗರ ಪೊಲೀಸ್ ಠಾಣೆ ಎ.ಎಸ್.ಐ ನಜಮೋದ್ದಿನ್, ಸಿಬ್ಬಂದಿಗಳಾದ ದಸ್ತಯ್ಯಾ, ಬೀರಪ್ಪ, ಮಹೇಶ ಅವರು ನೋಡಿ ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.