ಕಲಬುರಗಿ,ಜು.3-ಗಾಂಜಾ ಸೇವಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಜಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈದ್ಗಾ ಮೈದಾನದ ಹತ್ತಿರ ಗಾಂಜಾ ಸೇವಿಸಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂ.ಎಸ್.ಕೆ.ಮಿಲ್ ಖದೀರ್ ಚೌಕ್‍ನ ಅಬ್ದುಲ್ ಗಫಾರ್ ಎಂಬಾತನನ್ನು ಆರ್.ಜಿ.ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಹೀರಾಪುರ ಕ್ರಾಸ್ ಹತ್ತಿರದ ರಸ್ತೆಯ ಪಕ್ಕದಲ್ಲಿ ಮುಳ್ಳಿನ ಪೊದೆ ಮರೆಯಾಗಿ ಕುಳಿತು ಗಾಂಜಾ ಸೇವಿಸುತ್ತಿದ್ದ ಹೀರಾಪುರದ ಯೂಸೂಫ್ ಶೇಖ್ (25) ಮತ್ತು ಶೇಖ್ ಸೋಹೆಲ್ ಎಂಬುವವರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಆರ್.ಜಿ.ನಗರ ಮತ್ತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.