ಕಲಬುರಗಿ,ಜು.6-ನಗರದ ಮುಸ್ತಾಫ್ ಮಜೀದ್ ಎದರುಗಡೆ ಇರುವ ಖಬರಸ್ತಾನ್‍ದ ಖಾಲಿ ಜಾಗದಲ್ಲಿ ಕುಳಿತು ಗಾಂಜಾ ಸೇದುತ್ತಿದ್ದ ನಾಲ್ವರನ್ನು ಸಿಇಎನ್ ಪೊಲೀಸರು, ಪೀರ್ ಬಂಗಾಲಿ ದರ್ಗಾದ ಖುಲ್ಲಾ ಮೈದಾನದಲ್ಲಿ ಕುಳಿತ ಗಾಂಜಾ ಸೇವಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಸಬ್ ಅರ್ಬನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ಮುಸ್ತಾಫ್ ಮಜೀದ್ ಎದರುಗಡೆ ಇರುವ ಖಬರಸ್ತಾನ್‍ದ ಖುಲ್ಲಾ ಜಾಗದಲ್ಲಿ ಕುಳಿತು ಗಾಂಜಾ ಸೇವಿಸುತ್ತಿದ್ದ ವಾಜೀದ್ ಖಾನ್ (44), ಜಹೀರ್ (22), ಗೌಸ್ (19) ಮತ್ತು ಎಂ.ಡಿ.ಶಕೀಬ್ (33) ಎಂಬುವವರನ್ನು ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಈರಣ್ಣ, ಹೊನ್ನುರಸಾಬ್, ಗುರುನಾಥ ಮತ್ತು ಪ್ರಶಾಂತ ಅವರು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಇವರು ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದೆ.
ಇನ್ನು ಪೀರ್ ಬಂಗಾಲಿ ದರ್ಗಾ ಹತ್ತಿರ ಖುಲ್ಲಾ ಮೈದಾನದಲ್ಲಿ ಕುಳಿತು ಗಾಂಜಾ ಸೇವಿಸುತ್ತಿದ್ದ ಮಹ್ಮದ್ ಗೌಸ್ ಎಂಬಾತನನ್ನು ಸಬ್ ಅರ್ಬನ್ ಪೊಲೀಸ್ ಠಾಣೆಯ ಎ.ಎಸ್.ಐ.ನಾಗರಾಜ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮತ್ತು ಅನೀಲ ಅವರು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿರುವುದು ದೃಢ ಪಟ್ಟಿದೆ.
ಐವರ ವಿರುದ್ಧ ಎನ್.ಡಿ.ಪಿ.ಎಸ್.ಕಾಯ್ದೆ ಅಡಿ ಸಿಇಎನ್ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.