ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ

ಸಂಜೆವಾಣಿ ವಾರ್ತೆಸಿರುಗುಪ್ಪ, ಅ.21: ನಗರದ ಡ್ರೈವರ್ ಕಾಲೋನಿ ರಸ್ತೆಯಲ್ಲಿ 214 ಗ್ರಾಂನಷ್ಟು ಒಣ ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ಕು ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ.ಸೀಮಾಂಧ್ರ ಪ್ರದೇಶದ ಗುಂತಕಲ್ಲು ನಿವಾಸಿಗಳಾದ ಅಲಿಯಾಸ್ ಅಂಜಿ(19), ನಗರದ ದಿವಾಕರ(22), ಹರ್ಷ(19), ತಾಲ್ಲೂಕಿನ ಉಡೇಗೋಳ ಗ್ರಾಮದ ವಿಶ್ವನಾಥ (19) ಎಂಬುವ ಬಂಧಿತ ಆರೋಪಿಗಳು 214 ಗ್ರಾಂ ಗಾಂಜಾವು ಸುಮಾರು 27,820 ಬೆಲೆ ಬಾಳುವ ಒಣ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ಪೊಲೀಸ್ ಠಾಣೆಯ  ಇನ್ ಸ್ಪೆಕ್ಟರ್ ತಿಮ್ಮಣ್ಣ ನಾಯಕ ನೇತೃತ್ವದಲ್ಲಿ ಪಿ.ಎಸ್.ಐ ಹೊನ್ನಪ್ಪ ನೇತೃತ್ವದ ತಂಡದ ಸಿಬ್ಬಂದಿಗಳಾದ ರಸೂಲ್ ಸಾಬ್, ಈರಣ್ಣ, ದ್ಯಾಮನಗೌಡ, ವಿಜಯ ನಿಂಗಣ್ಣವರ, ಎ.ಬಸವರಾಜ, ವಿಷ್ಣುಮೋಹನ್ ಕಾರ್ಯಚರಣೆಯನ್ನು ನಡೆಸಿ ಆರೋಪಿಗಳನ್ನು ಮಾಲು ಸಮೇತವಾಗಿ ಬಂಧಿಸಿದ್ದಾರೆ.ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ ಎಂದು ಸಿ.ಪಿ.ಐ ಸುಂದರೇಶ್ ಕೆ.ಹೊಳೆಯಣ್ಣನವರ್ ಮಾಹಿತಿಯನ್ನು ನೀಡಿದರು.ಕಾನಸ್ಟೇಬಲ್ ಗಳಾದ ಚಿನ್ನಪ್ಪ, ರಾಥೋಡ್, ಈಶ್ವರಪ್ಪ, ಬೀರಪ್ಪ, ಸುದರ್ಶನ, ಗಾದಿಲಿಂಗಪ್ಪ ಇದ್ದರು.