ಗಾಂಜಾ ಸಾಗಾಣಿಕೆ-ವ್ಯಕ್ತಿ ಬಂಧನ

ಕೋಲಾರ,ಮಾ.೨೨: ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ ಗಾಂಜಾವನ್ನ ವಶಪಡಿಸಿಕೊಂಡಿದ್ದು, ಓರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟದ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ೫೦೦ ಗ್ರಾಂ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ, ಮಾಲೂರು ತಾಲೂಕಿನ ಜೋಡಿಪುರ ಗ್ರಾಮದ ನಂಜೇದೇವರು ಎಂಬಾತನನ್ನ ಅಬಕಾರಿ ಇಲಾಖೆ ಪೊಲಿಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಯ ಮನೆಯಲ್ಲೂ ಸಹ ಗಾಂಜಾ ಪತ್ತೆಯಾಗಿದ್ದು, ಬಂಧಿತನಿಂದ ಒಟ್ಟಾರೆ ೧ ಕೆಜಿ ೪೫೦ ಗ್ರಾಂ ಗಾಂಜಾ, ಒಂದು ಬೈಕ್ ನ್ನ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಉಪಾಯುಕ್ತ ರವಿಶಂಕರ್ ಮಾರ್ಗದರ್ಶನದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ನಟರಾಜ್, ಅಬಕಾರಿ ನಿರೀಕ್ಷಕರಾದ
ಸುಮ ಅವರು ದಾಳಿ ನಡೆಸಿದ್ದು, ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಟಿ ಗೋವಿಂದಪ್ಪ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ವೇಣುಗೋಪಾಲ್, ಅಬಕಾರಿ ಪೇದೆಗಳಾದ ಅಂಬರೀಷ್, ವಾಹನ ಚಾಲಕರಾದ ಸುಬ್ರಮಣಿ ಸಿಬ್ಬಂದಿಯಾದ ಜಯರಾಂ , ಅಶೋಕ್ ಹಾಗೂ ಸುಬ್ರಹ್ಮಣಿ ಭಾಗವಹಿಸಿದ್ದರು.