ಗಾಂಜಾ ಸಾಗಾಟ: ಆರೋಪಿ ಸೆರೆ

ಕಾಸರಗೋಡು, ಜ.೧೫- ಗಾಂಜಾ ಸಹಿತ ಉಪ್ಪಳ ನಿವಾಸಿಯೋರ್ವನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಲ್ಪಾಡಿ ಚುಕ್ರಿಯಡ್ಕದ ಅಬ್ದುಲ್ ಫಯಾಜ್ (೨೨) ಎಂದು ಗುರುತಿಸಲಾಗಿದೆ. ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ಸಂಶಯಗೊಂಡ ಅಬಕಾರಿ ದಳದ ಸಿಬ್ಬಂದಿ ತಪಾಸಣೆ ನಡೆಸಿದಾಗ ೧೨೮ ಗ್ರಾಂ ಗಾಂಜಾ ಈತನ ಬಳಿ ಪತ್ತೆಯಾಗಿದೆ. ಈತನ ಜೊತೆಗಿದ್ದ ನೌಫಾಲ್ ಎಂಬಾತ ಪರಾರಿಯಾಗಾಗಿದ್ದಾನೆ.