ಗಾಂಜಾ ಸಾಗಣೆ: ಮಹಿಳೆಯರಿಬ್ಬರ ಬಂಧನ

ಬೀದರ:ಮೇ.29: ತಾಲ್ಲೂಕಿನ ಬಗದಲ್ ಠಾಣೆ ವ್ಯಾಪ್ತಿಯ ಮೀನಕೇರಾ ಕ್ರಾಸ್ ಹತ್ತಿರ ಆಟೊರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ಮಹಿಳೆಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪಶ್ಚಿಮ ಕಲ್ಯಾಣ ಥಾಣೆಯ ಫಿಜಾ ಜಾಫರ್ ಹಾಗೂ ಕುಲಸುಮ್ ಮಜುಲಮ್ ಅಫ್ಜಲ್ ಖಾನ್ ಬಂಧಿತರು. ಆರೋಪಿಗಳಿಂದ ₹2 ಲಕ್ಷ ಮೌಲ್ಯದ ಗಾಂಜಾ, ₹2 ಸಾವಿರ ನಗದು ಹಾಗೂ ಆಟೊರಿಕ್ಷಾ ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಅಧಿಕಾರಿಗಳಾದ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಬಗದಲ್ ಠಾಣೆ ಪಿಎಸ್‍ಐಗಳಾದ ಇಂದಿರಾಬಾಯಿ ಪಾಟೀಲ, ಮೆಹಬೂಬ್ ಅಲಿ, ಸಿಬ್ಬಂದಿ ರವಿಕಾಂತ, ಅಶೋಕ ಕೋಟೆ, ಜಗದೀಶಕುಮಾರ, ಅನುರಾಧಾ ಹಾಗೂ ಸಂಜುಕುಮಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.