ಗಾಂಜಾ ವಶ; ಆರೋಪಿ ಬಂಧನ

ಹೊಸನಗರ.ಡಿ.೧; ತಾಲೂಕಿನ ಕುಕ್ಕಳಲೆ ಗ್ರಾಮದ ಕೆ.ಪಿ.ಕೃಷ್ಣ  ಎಂಬುವವನ ಮನೆ ಮೇಲೆ ಅಬಕಾರಿ ಪೊಲೀಸರು ದಾಳಿ ನೆಡೆಸಿ,  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 305 ಗ್ರಾಂ ಒಣಗಾಂಜಾ ಹಾಗೂ 360 ಗ್ರಾಂ ತೂಕದ ಹಸಿ ಗಾಂಜಾವನ್ನು ವಶಕ್ಕೆ ಪಡೆದು ಆರೋಪಿ ಕೃಷ್ಣನ ವಿರುದ್ದ ಎನ್‌ಡಿಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ. ಹಾಲನಾಯ್ಕ್, ಉಪ ನಿರೀಕ್ಷಕ ಪಿ.ಜೆ. ಜಾನ್ ಮತ್ತು ಸಿಬ್ಬಂದಿಗಳಾದ ನಾಗರಾಜ್, ರಂಜನ್ ಅರ್ಜುನ್ ಮೊದಲಾದವರು ಭಾಗವಹಿಸಿದ್ದರು.