
ಕಲಬುರಗಿ,ಜು.13: ನಗರದಲ್ಲಿ ಗಾಂಜಾ ಮಾರಾಟದ ವಿರುದ್ಧ ಪೋಲಿಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ನಗರದ ಟೇಕ್ ಬುರಾನ್ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸೇರಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಘಟನೆ ವರದಿಯಾಗಿದೆ.
ಬಂಧಿತರನ್ನು ಬಾಪುನಗರದ ಕೂಲಿ ಕೆಲಸಗಾರ ಪವನ್ ತಂದೆ ಬಾಬುರಾವ್ ಉಪಾಧ್ಯಾ(20) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಬಂಧಿತರಿಂದ 16,000ರೂ.ಗಳ ಮೌಲ್ಯದ ಒಟ್ಟು 2 ಕೆಜಿ 170 ಗ್ರಾಮ್ ಗಾಂಜಾ ಮತ್ತು 800ರೂ.ಗಳ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಭಾತ್ಮಿ ಮೇರೆಗೆ ಬ್ರಹ್ಮಪೂರ್ ಪೋಲಿಸ್ ಠಾಣೆಯ ಪಿಐ ಸಚಿನ್ ಎಸ್. ಚಲವಾದಿ ಅವರ ನೇತೃತ್ವದಲ್ಲಿ ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಅಭಿಯಂತರ ಅನಿಲಕುಮಾರ್ ತಂದೆ ಮಲ್ಲಿನಾಥ್ ಬಿರಾದಾರ್, ಎಎಸ್‍ಐ ಶಿವಶರಣಪ್ಪ ಗೋಡ್ಕೆ, ಮುಖ್ಯ ಪೇದೆಗಳಾದ ಶಿವಪ್ರಕಾಶ್, ಅಶೋಕ್, ಕೇಶುರಾಯ್, ಶಿವಶರಣಪ್ಪ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ವಶಪಡಿಸಿಕೊಂಡರು. ಪತ್ತೆ ಕಾರ್ಯಾಚರಣೆಯನ್ನು ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.