ಗಾಂಜಾ ಮಾರಾಟ: ಇಬ್ಬರ ಬಂಧನ, 610 ಗ್ರಾಂ.ಗಾಂಜಾ ವಶ

ಕಲಬುರಗಿ,ಜು.13-ಇಲ್ಲಿನ ಭರತನಗರ ತಾಂಡಾದ ಪಾಳುಬಿದ್ದ ಸರ್ಕಾರಿ ಹಾಸ್ಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಾಪು ನಗರದ ವಿಘ್ನೇಶ ಉಪಾಧ್ಯ (25) ಮತ್ತು ಚೆಂಗು ಪಾಟೀಲ ಎಂಬುವವರನ್ನು ಬ್ರಹ್ಮಪುರ ಪೊಲೀಸರು ಬಂಧಿಸಿ 4,880 ರೂ.ಮೌಲ್ಯದ 610 ಗ್ರಾಂ.ಗಾಂಜಾ ವಶಪಡಿಸಿಕೊಂಡಿದ್ದಾರೆ.
ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಎ.ಚಂದ್ರಪ್ಪ, ದಕ್ಷಿಣ ಉಪ-ವಿಭಾಗದ ಎಸಿಪಿ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ ಪಂಚರೊಂದಿಗೆ ಬ್ರಹ್ಮಪುರ ಪೊಲೀಸ್ ಠಾಣೆ ಪಿಐ ಸಚಿನ್ ಎಸ್.ಚಲವಾದಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸತೀಶ, ರವಿ, ಸಂತೋಷಕುಮಾರ ಮತ್ತು ಕಲ್ಯಾಣಕುಮಾರ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.