ಗಾಂಜಾ ಮಾರಾಟ ಅರೋಪಿಗಳ ಬಂಧನ

ಚನ್ನಪಟ್ಟಣ, ಜ.೨೧- ಖಚಿತ ಮಾಹಿತಿ ಪಡೆದ ಚನ್ನಪಟ್ಟಣ ಅಬ್ಕಾರಿ ಪೊಲೀಸರು ಜಿಲ್ಲಾ ಅಬ್ಕಾರಿ ಪೊಲೀಸ್ ಮಾರ್ಗದರ್ಶನದಲ್ಲಿ ಲಕ್ಷಾಂತರರೂ ಮೌಲ್ಯದ ಗಾಂಜಾ ಹಾಗೂ ಆರೋಪಿಗಳನ್ನು ಬಂಧಿಸಿ, ಗಾಂಜಾ ಸಾಗಿಸುತ್ತಿದ್ದ ವಾಹಾನವನ್ನು ವಶಪಡಿಸಿಕೊಂಡಿರುವ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ವಾ ಹೋಟೆಲ್ ಬಳಿಯ ಎ.ಪಿ.ಎಂ.ಸಿ.ಮಾರುಕಟ್ಟೆಯ ಬಳಿ ನಡೆದಿದೆ.
ಖಚಿತ ಮಾಹಿತಿ ಪಡೆದ ಬೆಂಗಳೂರು ದಕ್ಷಿಣ ವಲಯದ ವಲಯ ಅಬ್ಕಾರಿ ಜಂಟಿ ಆಯುಕ್ತರು, ರಾಮನಗರ ಅಬ್ಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ರಾಮನಗರ ಉಪ ಅಧೀಕ್ಷಕರು ಹಾಗೂ ಚನ್ನಪಟ್ಟಣ ಅಬ್ಕಾರಿ ಪೊಲೀಸ್ ಸಿಬ್ಬಂದಿ ಅನುಮಾನಸ್ಪಧವಾಗಿ ತೆರಳುತ್ತಿದ್ದ ಮಾರುತಿ ಸಿಪ್ಟ್ ಕಾರನ್ನು ತಪಾಸಣೆ ಮಾಡಿದಾಗ ಗಾಂಜಾ ಪತ್ತೆಯಾಗಿದೆ.
ಕಾರಿನಲ್ಲಿ ಹೂ, ಬೀಜ ತೆನೆಗಳಿಂದ ಕೂಡಿದ ಒಣ ಗಾಂಜಾ ಅಂದರೆ ಸುಮಾರು ೪.೩೫೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ, ಇದರ ಒಟ್ಟು ಮೌಲ್ಯ ಹತ್ತು ಲಕ್ಷರೂಗಳೆಂದು ಅಂದಾಜಿಸಲಾಗಿದೆ.
ದಾಳಿ ಮಾಡಿದ ಸಂದರ್ಭದಲ್ಲಿ ಸೆರೆಸಿಕ್ಕ ಆರೋಪಿಗಳನ್ನು ಅಯುಬ್‌ಪಾಷ (೫೩) ಎಂದು ಹೇಳಲಾಗಿದ್ದು, ರಾಮನಗರದ ಜಿಲ್ಲಾ ಕೇಂದ್ರದ ಮೆಹಬೂಬ್ ನಗರ ಮೊಹಲ್ಲಾದ ಅಬ್ದುಲ್ ಗಾನಿ ಎಂಬುವರ ಮಗ, ಎರಡನೆ ಆರೋಪಿ ಶಬ್ಬೀರ್ ಪಾಷ (೫೦) ಎಂದು ಹೇಳಲಾಗಿದ್ದು, ಇದೇ ಮೊಹಲ್ಲಾದ ಅಬ್ದುಲ್ ಗಾನಿ ಎಂಬುವರ ಮಗ ಮೂರನೇ ಆರೋಪಿ ಶಿವರಾಜು (೨೩) ಎಂದು ಹೇಳಲಾಗಿದ್ದು ರಾಮನಗರ ತಾಲ್ಲೂಕಿನ ಕಾವೇರಿದೊಡ್ಡಿ ಗ್ರಾಮದ ಲೇಟ್ ಮಲ್ಲೇಶ್ ಎಂಬುವರ ಮಗ, ನಾಲ್ಕನೆ ಆರೋಪಿ ಸಚಿನ್ (೨೫) ಎಂದು ಹೇಳಲಾಗಿದ್ದು ರಾಮನಗರ ತಾಲ್ಲೂಕಿನ ವಿಭೂತಿಕೆರೆಯ ಲೇಟ್ ಮಹದೇವಯ್ಯ ಎಂಬುವರ ಮಗ ಎಂದು ಹೇಳಲಾಗಿದೆ.
ಈ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಬ್ಕಾರಿ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿದೆ.