ಗಾಂಜಾ ಮಾರಾಟಗಾರರ ಬಂಧನ

ಮೈಸೂರು,ಮಾ.20:- ಸಿ.ಸಿ.ಬಿ. ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 5 ಕೆ.ಜಿ. 570 ಗ್ರಾಂ ತೂಕದ ಗಾಂಜಾ, 4,200 ರೂ ನಗದು, 1 ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಸಿ.ಸಿ.ಬಿ. ಹಾಗೂ ಮೇಟಗಳ್ಳಿ ಪೆÇಲೀಸರು ಮೇಟಗಳ್ಳಿ ಪೆÇಲೀಸ್ ಠಾಣಾ ಸರಹದ್ದು ಬೆಲವತ್ತ ಗ್ರಾಮದ ಮನೆಯೊಂದರ ಮೇಲೆ 18/03/2021 ರಂದು ದಾಳಿ ಮಾಡಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡಿದ್ದ ಇರ್ಫಾನ್ ಪಾಷ ಬಿನ್ ಲೇಟ್ ಸರ್ದಾರ್ ಪಾಷ, (27), ಬೆಲವತ್ತ ಗ್ರಾಮ, ಮೈಸೂರು, ರಿಯಾಜ್ ಪಾಷ ಬಿನ್ ಮೆಹಬೂಬ್ ಪಾಷ, (23), ಗೌಸಿಯಾನಗರ, ಮೈಸೂರು ಎಂಬವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ 5 ಕೆ.ಜಿ. 570 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಿ ಸಂಪಾದನೆ ಮಾಡಿದ್ದ 4,200 ರೂ ನಗದು ಹಣ, 1 ಮೊಬೈಲ್ ಫೆÇೀನನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಮೇಟಗಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.ರವರುಗಳಾದ ಡಾ. ಎ.ಎನ್.ಪ್ರಕಾಶ್ ಗೌಡ ಹಾಗೂ ಗೀತ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ. ಎ.ಸಿ.ಪಿ ಸಿ.ಕೆ.ಅಶ್ವಥನಾರಾಯಣ ಅವರ ಉಸ್ತುವಾರಿಯಲ್ಲಿ ಸಿ.ಸಿ.ಬಿ.ಯ ಪೆÇಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಮೇಟಗಳ್ಳಿ ಪೆÇಲೀಸ್ ಠಾಣೆಯ ಇನ್ಸ್ಪೆಕ್ಟರ್ ಎ.ಮಲ್ಲೇಶ, ಪಿ.ಎಸ್.ಐ. ವಿಶ್ವನಾಥ್.ಕೆ., ಎ.ಎಸ್.ಐ.ರವರುಗಳಾದ ಆರ್.ರಾಜು, ಯು.ಉಮೇಶ್ ಸಿಬ್ಬಂದಿಯವರಾದ ದೀಪಕ್, ಜೋಸೆಫ್ ನೊರ್ಹೋನ, ಶ್ರೀನಿವಾಸಪ್ರಸಾದ್, ರಾಧೇಶ್, ಜನಾರ್ಧನ್ ರಾವ್, ರಾಮಯ್ಯ, ಪುರುಷೋತ್ತಮ, ಸುನಿಲ್, ರಘು, ಮಧುಕುಮಾರ್, ರಾಜೇಶ್, ಬಸವರಾಜು, ಭವಾನಿ, ಮಮತ.ಎನ್.ಜಿ. ಶ್ರೀನಿವಾಸರವರುಗಳು ಮಾಡಿರುತ್ತಾರೆ.