ಗಾಂಜಾ ಮತ್ತು ಗಿಡ ವಶ: ಇಬ್ಬರ ಬಂಧನ

ಹರಪನಹಳ್ಳಿ.ಸೆ.೧೬; ತಾಲೂಕಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಗಿಡಗಳು ಮತ್ತು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನ ಮತ್ತಿಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೇ ನಂ.೪೨೮/೪ ಜಮೀನಿನಲ್ಲಿ ದಾಸಪ್ಪನವರ ಬಸವರಾಜಪ್ಪ ಎಂಬುವವರು ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ ನಿರ್ದೇಶನದಂತೆ ಸಿಪಿಐ ಕೆ.ಕುಮಾರ್ ನೇತೃತ್ವದಲ್ಲಿ ಹರಪನಹಳ್ಳಿ ಪಿಎಸ್‌ಐ ಸಿ.ಪ್ರಕಾಶ್, ಚಿಗಟೇರಿ ಪಿಎಸ್‌ಐ ಮಹ್ಮದ್ ಇಸಾಕ್ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಮಾದಕ ವಸ್ತುವಾದ ೮ ಗಾಂಜಾ ಗಿಡಗಳು ಸುಮಾರು ೨೦ ಕೆ.ಜಿ ತೂಕವಿದ್ದು, ೨ ಲಕ್ಷರೂ ಮೌಲ್ಯ ಬೆಲೆ ಬಾಳುವ ಗಿಡಗಳು ಮತ್ತು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಹೊಳಲು ರಸ್ತೆಯ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಅನಾಮಧೇಯ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ ನಿರ್ದೇಶನದಂತೆ ಸಿಪಿಐ ಕೆ.ಕುಮಾರ್ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಪಿಎಸ್‌ಐ ಸಿ.ಪ್ರಕಾಶ್ ನೇತೃತ್ವದ ತಂಡ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಚನ್ನಹಳ್ಳಿ ತಾಂಡದ ಲಕ್ಯಾನಾಯ್ಕ(೫೮) ಎಂಬಾತನ ಮೇಲೆ ದಾಳಿ ನಡೆಸಿ ಒಟ್ಟು ೨೧೫ ಗ್ರಾಂ ತೂಕದ ೧೦ ಸಾವಿರರೂ ಮೌಲ್ಯದ ಒಣಗಿದ ಗಾಂಜಾ ಸೋಪ್ಪು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.