
ಬೀದರ್:ಎ.18: ಇತ್ತೀಚಿನ ದಿನಗಳಲ್ಲಿ ಬೀದರ ನಗರದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದ ಕಾರಣ ಸದರಿ ಪ್ರಕರಣಗಳು ತಡೆಗಟ್ಟಲು ಹಾಗು ಪತ್ತೆ ಮಾಡಲು ಬೀದರ ಉಪ ವಿಭಾಗದಿಂದ ಒಂದು ವಿಶೇಷ ರೌಡಿ ನಿಗ್ರಹ ದಳ ತಂಡವನ್ನು ಶ್ರೀ ಚೆನ್ನಬಸವಣ್ಣ ಎಸ್.ಎಲ್., ಐಪಿಎಎಸ್, ಪೆÇಲೀಸ ಅಧೀಕ್ಷಕರು, ಬೀದರ ಮತ್ತು ಶ್ರೀ ಮಹೇಶ ಮೇಘಣ್ಣವರ್, ಹೆಚ್ಚುವರಿ ಪೆÇಲೀಸ ಅಧೀಕ್ಷಕರು, ಬೀದರ ಹಾಗೂ ಶ್ರೀ ಕೆ.ಎಮ್. ಸತೀಷ ಪೆÇಲೀಸ್, ಉಪಾಧೀಕ್ಷಕರು, ಬೀದರ ರವರ ಮಾರ್ಗದರ್ಶನದಲ್ಲಿ ಶ್ರೀ ಶ್ರೀ ಹನುಮರೆಡ್ಡೆಪ್ಪ ಪೆÇಲೀಸ್ ನಿರೀಕ್ಷಕರು, ಹಾಗೂ ಸವಿತಾ ಮ.ಪಿ.ಎಸ್.ಐ, ಮತ್ತು ಸಿಬ್ಬಂದಿಯವರಾದ ವಿನಾಯಕ ಎಎಸಐ, ನವೀನ್, ಸಿಹೆಚಸಿ-910, ಸಂಜುಕುಮಾರ ಸಿಹೆಚಸಿ-750, ಪ್ರವೀಣ ಸಿಪಿಸಿ-1349, ಗಂಗಾಧರ ಸಿಪಿಸಿ-1953, ಚಂದ್ರಕಾಂತ ಸಿಪಿಸಿ-1265, ಇಸ್ಮಾಯಿಲ ಸಿಪಿಸಿ-1830 ಹಾಗೂ ಜೀಪ ಚಾಲಕರಾದ ದೀಪಕ ಎಹೆಚಸಿ-98 ರವರ ಒಳಗೊಂಡ ಒಂದು ತಂಡವನ್ನು ರಚಿಸಿದ್ದು ಸದರಿ ತಂಡವು ಇಂದು ದಿನಾಂಕ 12/04/2023 ರಂದು ಒಬ್ಬ ಆರೋಪಿತಳನ್ನು ದಸ್ತಗಿರಿ ಮಾಡಿದ್ದು, ಇನ್ನೊಬ್ಬ ಆರೋಪಿತನು ಫರಾರಿ ಇದ್ದು ಗಾಂಧಿ ಗಂಟ ಪೆÇಲೀಸ್ ಠಾಣೆಯ ಅಪರಾಧ ಸಂಖ್ಯೆ 77/2023 ಕಲಂ 20(ಬಿ) ಎನಡಿಪಿಎಸ ಪ್ರಕರಣ ದಾಖಲು ಮಾಡಿದ್ದು ಆರೋಪಿತರಿಂದ ಒಟ್ಟು 4.478 ಕಿ.ಗ್ರಾಂ ಗಾಂಜಾ ಅದರ ಅ.ಕಿ 4.78000/-ರೂ, ಮುದ್ದೆ ಮಾಲು ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ಸದರಿ ಪ್ರಕರಣವನ್ನು ಭೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.