ಗಾಂಜಾ ಗಿಡಗಳು ಜಪ್ತಿ; ಆರೋಪಿ ಪರಾರಿ

ಭಾಲ್ಕಿ: ನ .21- ತಾಲ್ಲೂಕಿನ ನಿಟ್ಟೂರ ಗ್ರಾಮದ ದಿ.ಕೇಶವರಾವ್‌ ವೈಜೆ ಅವರ ಸರ್ವೆ ನಂ 109/4ರ ಹೊಲದಲ್ಲಿ ಮೆಣಸಿನಕಾಯಿ ಗಿಡಗಳ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5 ಅಡಿ ಎತ್ತರದ 11 ಗಾಂಜಾ ಗಿಡಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿಕೊಂಡಿದ್ದಾರೆ.
ದಾಳಿಯ ಕಾಲಕ್ಕೆ ಆರೋಪಿ ಮನೋಹರ ಕೇಶವರಾವ್‌ ವೈಜೆ ಪರಾರಿಯಾಗಿದ್ದು, ಈತನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಭಾಲ್ಕಿ ವಲಯದ ಅಬಕಾರಿ ನಿರೀಕ್ಷಕ ಅನಿಲ್ ರಾಜ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ರವೀಂದ್ರ ಪಾಟೀಲ,
ಅಬಕಾರಿ ಉಪ ನಿರೀಕ್ಷಕರಾದ ದುಂಡಪ್ಪಾ ಹಕ್ಕಿ, ದೌಲತರಾಯ, ನಾನಾಗೌಡ ಕೇರೂರ, ಕಂದಾಯ ನಿರೀಕ್ಷಕ ರಾಜಕುಮಾರ ಕಣಜೆ, ಗ್ರಾಮ ಲೆಕ್ಕಿಗರಾದ ಅವಿನಾಶ, ಅಬಕಾರಿ ರಕ್ಷಕರಾದ ಶ್ರೀಕಾಂತ, ಬಸವರಾಜ್, ಶಿವಶಂಕರ, ಟೋನಿ ಸೇಡ್ರಿಕ್, ವೆಂಕಟೇಶ ಸೋನೊನೆ, ಅಬ್ದುಲ್ ಅತೀಖ್‌, ವಿಷ್ಣುವರ್ಧನ ಉಪಸ್ಥಿತರಿದ್ದರು.