ಗಸಗಸೆ ಹಣ್ಣು ರುಚಿಗೂ ಸೈ… ಆರೋಗ್ಯಕ್ಕೂ ಸೈ

ಗಸಗಸೆ ಮರ ತುಂಬಾ ಕಡಿಮೆ ಸಮಯದಲ್ಲಿಯೇ ವೇಗವಾಗಿ ಬೆಳೆಯುವ ಮರವಾಗಿದೆ. ಗಸಗಸೆ ಮರವನ್ನು ಕೆರ್ಸನ್ ಫ್ರೂಟ್ ಅಥವಾ ಮುಂಟಿಂಗಿಯಾ ಕ್ಯಾಲಬುರಾ ಎಂಬ ಹೆಸರುಗಳಿಂದ ಸಹ ಕರೆಯಲಾಗುತ್ತದೆ.ಇದರ ಹಣ್ಣಿನಲ್ಲಿ ಗಸಗಸೆ ಹಣ್ಣನ್ನು ಹೋಲುವ ನೂರಾರು ಬೀಜಗಳು ಇರುವುದರಿಂದ ಈ ಮರಕ್ಕೆ ಗಸಗಸೆ ಮರ ಎಂಬ ಹೆಸರು ಬಂದಿದೆ.
ಈ ಮರಗಳು ದಕ್ಷಿಣ ಅಮೆರಿಕಕ್ಕೆ ಸೇರಿದ್ದವು ಆಗಿದ್ದು ಸಾಮಾನ್ಯವಾಗಿ ಉಷ್ಣವಲಯ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಮತ್ತು ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಈ ಮರಗಳನ್ನು ಬೆಳೆಸಲಾಗುತ್ತದೆ. ಈ ಗಸಗಸೆ ಹಣ್ಣು ಅನೇಕ ರೀತಿಯ ಆರೋಗ್ಯ ನಿವಾರಕ ಲಕ್ಷಣಗಳನ್ನು ಹೊಂದಿದೆ.
ಗಸಗಸೆ ಹಣ್ಣು ರಕ್ತದಲ್ಲಿರುವ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಮಧುಮೇಹ ಕಾಯಿಲೆ ಇರುವವರಿಗೆ ಉತ್ತಮವಾಗಿರುತ್ತದೆ.
ಗಸಗಸೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಪ್ರಬಲವಾದ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ, ಇದು ಶೀತಗಳು, ಫ್ಲೂಗಳು ಮತ್ತು ಹೃದಯರಕ್ತನಾಳದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ೧೦೦ ಗ್ರಾಂ ಹಣ್ಣುನಲ್ಲಿ ೧೫೦ ಮಿಗ್ರಾಂ ವಿಟಮಿನ್ ಸಿ ನೀಡುತ್ತದೆ.
ಈ ಹಣ್ಣಿನ ಎಲೆಗಳನ್ನು ಅಧ್ಯಯನ ಮಾಡಲಾಗಿದ್ದು ಮತ್ತು ಉತ್ತಮ ಆಂಟಿಕಾನ್ಸರ್ ಸಾಮರ್ಥ್ಯಗಳನ್ನು ಹೊಂದಿರುವ ಕಾರಣ ಮುಂದೆ ಭವಿಷ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಹೆಚ್ಚು ವ್ಯಾಪಕವಾಗಿ ಬಳಸಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಈ ಹಣ್ಣಿನ ಎಲೆಗಳಿಂದ ಮಾಡಿದ ಚಹಾ ಕುಡಿಯುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಏಕೆಂದರೆ ಇದು ನೈಟ್ರಿಕ್ ಆಕ್ಸೈಡ್ ಅನ್ನು ಹೊಂದಿರುತ್ತದೆ ಹಾಗೂ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಸಂಚಾರವನ್ನು ಸುಧಾರಿಸುತ್ತದೆ.
ಗಸಗಸೆ ಹಣ್ಣುಗಳನ್ನು ತಿನ್ನುವುದರಿಂದ ಮತ್ತು ಎಲೆಗಳಿಂದ ಮಾಡಿದ ಚಹಾವನ್ನು ಕುಡಿಯುವುದು ತಲೆನೋವು ಸಮಸ್ಯೆಯನ್ನು ತೊಡೆದುಹಾಕಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.