ಗವೀಶ ಹಿರೇಮಠ ಸಂಸ್ಮರಣಾ ಗ್ರಂಥಕ್ಕೆ ಲೇಖನಗಳ ಆಹ್ವಾನ

ಕಲಬುರಗಿ,ಮಾ. 27:ಕವಿ, ಕಾದಂಬರಿಕಾರ ಮತ್ತು ರಂಗಭೂಮಿ ಚೇತನ ಗವೀಶ ಹಿರೇಮಠ ಅವರ ಸಂಸ್ಮರಣಾ ಗ್ರಂಥಕ್ಕೆ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟಣಾ ಸಮಿತಿ ಕೋರಿದೆ.

ಗವೀಶ ಹಿರೇಮಠ ಅವರು ನಿಧನರಾಗಿ ಮುಂಬರುವ ಆಗಸ್ಟ್ 13 ಕ್ಕೆ ಒಂದು ವರ್ಷ ತುಂಬುವ ಹಿನ್ನೆಲೆಯಲ್ಲಿ, ಸಕಾಲಕ್ಕೆ ಲೇಖನಗಳು ಸಂಗ್ರಹವಾದರೆ, ಸಂಸ್ಮರಣಾ ಗ್ರಂಥವನ್ನು ಪ್ರಕಟಿಸುವ ಬಗ್ಗೆ ಆಲೋಚನೆಯಿದೆ ಎಂದು ಸಮಿತಿ ತಿಳಿಸಿದೆ.

ಹಿರಿಯ ಲೇಖಕರಾಗಿರುವ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮತ್ತು ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಸಂಪಾದಕರಾಗಿದ್ದು, ಗವೀಶ ಹಿರೇಮಠ ಅವರ ಸಾಹಿತ್ಯದ ಸಮೀಕ್ಷೆ, ರಂಗಭೂಮಿಗೆ ಸಲ್ಲಿಸಿದ ಕೊಡುಗೆ, ವಿವಿಧ ಅಕಾಡೆಮಿಗಳಲ್ಲಿ ಸಲ್ಲಿಸಿದ ಸೇವೆ, ಗುಲಬರ್ಗ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕರಾಗಿ ಸಲ್ಲಿಸಿದ ವೃತ್ತಿ ಜೀವನ, ಕನ್ನಡ ಅಧ್ಯಯನ ಸಂಸ್ಥೆಯ ಪ್ರಸಾರಾಂಗದ ಕಾರ್ಯ, ಅವರು ಬರೆದ ಅನೇಕ ಲೇಖನಗಳು ಪಠ್ಯ ಆಗಿರುವ ಬಗ್ಗೆ, ಚಿತ್ರಕಲೆ, ನಾಟಕ, ಕಲಾವಿದರ ಬದುಕು-ಬರಹ, ಚರಿತ್ರೆ ಮತ್ತು ಕನ್ನಡದಲ್ಲಿ ಅತಿ ಹೆಚ್ಚು ಸಂಪಾದಿಸಿರುವ ಅಭಿನಂದನಾ ಗ್ರಂಥಗಳ ಬಗ್ಗೆ ವಿಶ್ಲೇಷಣಾತ್ಮಕವಾದ ಮತ್ತು ಸಮೀಕ್ಷೆಯ ರೀತಿಯ ಲೇಖನಗಳನ್ನು ಸಾಹಿತ್ಯಲೋಕದಿಂದ ಮತ್ತು ಅವರೊಂದಿಗೆ ಕಾರ್ಯನಿರ್ವಹಿಸಿದ ಒಡನಾಡಿಗಳಿಂದ ಆಹ್ವಾನಿಸಲಾಗಿದೆ. ಗವೀಶ ಹಿರೇಮಠ ಅವರ ಜೊತೆ ವೃತ್ತಿ ಜೀವನದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಸಹೊದ್ಯೋಗಿಗಳು, ಸಹಪಾಠಿಗಳು, ಅವರ ಶಿಷ್ಯ ಬಳಗ ಮತ್ತು ಲೇಖಕ ಸ್ನೇಹಿತರು, ಅವರ ಜೊತೆಗಿನ ನೆನಪುಗಳನ್ನು ದಾಖಲಿಸುವ ಲೇಖನವನ್ನು ಬರೆದುಕೊಡುವಂತೆ ಸಂಪಾದಕರು ಕೋರಿದ್ದಾರೆ. ಈ ಲೇಖನಗಳನ್ನು ಇಮೇಲ್ : seಜಚಿmರಿoshi@gmಚಿiಟ.ಛಿom ಮತ್ತು mಚಿhimuಟಿಟಿuಡಿ@gmಚಿiಟ.ಛಿom ಗೆ ಕಳಿಸಿಕೊಡಲು ಕೋರಲಾಗಿದೆ. ಅಥವಾ ಮಹಿಪಾಲರೆಡ್ಡಿ ಮುನ್ನೂರ್, ಅಮ್ಮ, ಮನೆ ನಂ.33, ರಾಮಚಂದ್ರ ಬಡಾವಣೆ, ಊಡಗಿ ರಸ್ತೆ ಸೇಡಮ್-585222, ಜಿಲ್ಲೆ ಕಲಬುರಗಿ ಈ ವಿಳಾಸಕ್ಕೆ ಲೇಖನಗಳನ್ನು ಕಳಿಸುವಂತೆ ಸಮಿತಿ ಮನವಿ ಮಾಡಿದೆ.