ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದ ಎನ್.ಎಸ್ ಬೋಸರಾಜು

ರಾಯಚೂರು,ಏ.೦೨- ಸಮೀಪದ ಯರಮರಸ್‌ನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ( ಹೆಚ್‌ಕೆಈಎಸ್) ಯ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನೂತನವಾಗಿ ಪೂರ್ವ ಪ್ರಾಥಮಿಕ ಶಾಲಾ ಕಟ್ಟಡ ಶಂಕುಸ್ಥಾಪನೆಗಾಗಿ ಆಗಮಿಸಿದ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಅವರು ಶ್ರೀಗಳ ಆಸೀರ್ವಾದ ಪಡೆದರು.
ಆಶೀರ್ವಾದ ಪಡೆದ ನಂತರ ಶ್ರೀಗಳ ಕುಷಲೋಪರಿ ವಿಚಾರಿಸಿದರು. ನಂತರ ಶ್ರೀಗಳು ಎನ್ ಎಸ್ ಬೋಸರಾಜು ಅವರಿಗೆ ಹೇಗಿದ್ದವರು ಹಾಗೇಯೇ ಇದ್ದೀರಿ ಎಂದು ಮಾತನಾಡುತ್ತಾ ಆ ದೇವರು ಆರೋಗ್ಯ ಇನ್ನಷ್ಟು ಕರುಣಿಸಲೆಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ದೊಡ್ಡ ಬಸ್ಸಪ್ಪಗೌಡ, ಗಿರಿಜಾ ಶಂಕರ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.