ಗವಾಯಿಗಳು ನಮ್ಮ ನಡುವೆ ಇದ್ದ ಮಹಾನ್ ಪ್ರತಿಭೆ

ಕೆ.ಆರ್.ಪೇಟೆ:ಏ:18: ಸಂಗೀತ ಮತ್ತು ಸಾಹಿತ್ಯ ಮನುಷ್ಯನ ಭಾವನೆಗಳನ್ನು ನಿಯಂತ್ರಿಸುವ, ಸನ್ಮಾ ರ್ಗಕ್ಕೆ ಕೊಂಡೊಯ್ಯುವ ಸಾಮಾಥ್ರ್ಯವನ್ನೊಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತತಿನ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಪಂಡಿತ ಪುಟ್ಟರಾಜ ಗವಾಯಿ ಗಳ ಸ್ಮರಣಾರ್ಥ ಗಾನಗಂಧರ್ವ ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಕಲಾ ಶಾಲೆಯು ಆಯೋಜಿಸಿದ್ದ ದೀಪ ನಮನ ಮತ್ತು ಮಕ್ಕಳ ಸಾಹಿತಿ ಮಾರೇನಹಳ್ಳಿ ಲೋಕೇಶ್ ರವರು ಬರೆದಿರುವ ಪುಟ್ಟರಾಜ ವಾಯಿಗಳ ನುಡಿನಮನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪಂಡಿತ ಪುಟ್ಟರಾಜ ಗವಾಯಿಗಳು ನಮ್ಮ ನಡುವೆ ಇದ್ದ ಮಹಾನ್ ಪ್ರತಿಭೆ ಕಣ್ಣೀಲ್ಲದಿದ್ದರೂ ಕಣ್ಣಿದ್ದವರಿಗೆ ಕಡಿಮೆ ಇಲ್ಲದಂತೆ ದೊಡ್ಡ ಸಾಧನೆ ಮಾಡಿದವರು. ಸಂಗೀತ ಕ್ಷೇತ್ರದಲ್ಲಿ ಅವರ ಹೆಸರು ಸಧಾ ಸ್ಮರಣೀಯವಾಗಿದ್ದು ಸಾವಿರಾರು ಶಿಷ್ಯರನ್ನು ಸಂಗೀತ ಲೋಕಕ್ಕೆ ಕೊಡುಗೆಯಾಗಿ ನೀಡಿದವರು. ಅವರನ್ನು ಕುರಿತು ಮಾರೇನಹಳ್ಳಿ ಲೋಕೇಶ್ ರವರು ವ್ಯಕ್ತಿ ನಮನವನ್ನು ಗೀತೆಗಳ ರೂಪದಲ್ಲಿ ಬರೆದಿರುವದು ಮಹಾನ್ ಚೇತನಕ್ಕೆ ಕೊಟ್ಟ ಕೊಡುಗೆಯಾಗಿದೆ. ಒಬ್ಬ ವ್ಯಕ್ತಿಯನ್ನು ಕುರಿತು ಒಬ್ಬರೇ 25 ಕ್ಕು ಹೆಚ್ಚು ಕವಿತೆಗಳನ್ನು ಈ ಕೃತಿಯಲ್ಲಿ ಬರೆದಿದ್ದು ಮಕ್ಕಳು ಹಾಡಿಕೊಳ್ಳುವ ರೀತಿಯಲ್ಲಿ ರಚಿಸಿಸಂಘೀತ ಸಂಯೋಜನೆಗೆ ಸುಲಭವಾಗಿಸಿದ್ದಾರೆ. ಈ ಕವಿvಗಳಿಗೆ ಸಂಗೀತ ಶಾಲೆಯ ಮುಖ್ಯಸ್ಥರಾದ ಗವಾಯಿಗಳ ಶಿಷ್ಯ ಶ್ರೀಕಾಂತ್ ಚಿಮ್ಮಲ್ ಸ್ವರಸಂಯೋಜನೆ ಮಾಡಿರುವದು ಶ್ಲಾಘನೀಯ ಎಂದರು.
ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ ಅಂಧರಿಗೆ ಅನುಕಂಪ ಬೇಡ ಅವರಿಗೆ ಅವಕಾಶ ನೀಡಿ, ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕಲು ಅವಕಾಶ ಮಾಡಿಕೊಡಿ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಪ್ರಯತ್ನ ಸಮಾಜ ಮಾಡಬೇಕೆಂಬುದು ಪುಟ್ಟರಾಜ ಗವಾಯಿಗಳ ಕನಸಾಗಿತ್ತು.
ಕಣ್ನಿಲ್ಲದೆಯೂ ಅದ್ಬುತವಾದುದನ್ನು ಸಾಧಿಸಿದ ಗವಾಯಿಗಳ ಬಗ್ಗೆ ತಿಳಿದುಕೊಳ್ಳುವದೇ ರೋಮಾಂ ಚ£ವಾಗಿದ್ದು ಅವರನ್ನು ಕುರಿತು ಬರೆದಿರುವ ಈ ಪುಸ್ತಕದÀ ಕವಿತೆಗಳು ಗವಾಯಿಗಳ ಬದುಕು ಸಾಧನೆಗಳನ್ನು ಅನಾವರಣಗೊಳಿಸುತ್ತದೆ ಎಂದರು. ಆದ್ದರಿಂದ ಸಂಗೀತಶಾಲೆಯ ಮಕ್ಕಳು ಗವಾಯಿ ಗಳನನು ಮಾದರಿಯಾಗಿಸಿಕೊಂಡು ಇಂತಹ ಕವಿತೆ ಬರೆಯುವ, ಹಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜಾನಪದ ಜಾನಪದ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ಮಾvನಾಡಿ ಪುಟ್ಟರಾಜ ಗವಾಯಿಗಳು ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಅಂದುಕೊಂಡಿದ್ದನ್ನು ದೃತಿಗೆಡದೆ ಸಾಧಿಸಿ ತೋರಿಸಿದವರು. ಪುಣ್ಯಾಶ್ರಮವನ್ನು ಸ್ಥಾಪಿಸಿ ಸಾವಿರಾರು ಅಂಧರ ಬಾಳಿಗೆ ಬೆಳಕಾದವರು. ಅವರನ್ನು ಕುರಿತು ಕಾರ್ಯಕ್ರಮಗಳು ನಾಡಿನಾದ್ಯಂತ ನಡೆಯುತ್ತಿರಬೇಕು. ಸಮಾಜಕ್ಕೆ ಮತ್ತು ವ್ಯಕ್ತಿಗಳಿಗೆ ಅವರ ಸೂರ್ತಿ ಯಾಗ ಬೇಕೆಂದರು. ಉದ್ಯಮಿ ಕೆ.ಎಸ್.ರಾಜೇಶ್, ಕೃತಿಯ ಲೇಖಕ ಮಾರೇನಹಳ್ಳಿ ಲೋಕೇಶ್ ಸಂಗೀತಶಾಲೆಯ ಮುಖ್ಯಸ್ಥ ಶ್ರೀಕಾಂತ್ ಚಿಮ್ಮಲ್ ಮಾತನಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ರಮೇಶ್, ಪಿಡಿಓ ಮಲ್ಲೇಶ್, ಗ್ರಾಮಪಂಚಾಯಿತಿ ಸದಸ್ಯ ಆರ್. ಶ್ರೀನಿವಾಸ್, ಹಾಡುಗಾರ ರವಿಶಿವಕುಮಾರ್, ಶಿಕ್ಷಕ ಮಂಜು, ನಾರಾಯಣಸ್ವಾಮಿ, ಮಹೇಶ್, ಚನ್ನೇಗೌಡ, ಜಯಶ್ರೀ ಚಿಮ್ಮಲ್ ಇತರರಿದ್ದರು.