ಗಲೀಜು ನೀರಿನಿಂದ ಹೈರಾಣಗುತ್ತಿರುವ ಇಂಗಳೇಶ್ವರ ಗ್ರಾಮಸ್ಥರು,ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಹೂವಿನ ಹಿಪ್ಪರಗಿ:ಮೇ.23: ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಕೊಳಚೆ ನೀರಿನಿಂದ ರಸ್ತೆಯೆಲ್ಲ ಚರಂಡಿಮಯವಾಗಿರುವುದು ಕಂಡು ಬಂದಿರುತ್ತದೆ.ಗ್ರಾಮದ ಚರಂಡಿಗಳ ಒಳಗಡೆ ಸಾಕಷ್ಟು ಹೊಲಸು ಇರುತ್ತದೆ. ಗ್ರಾಮ ಪಂಚಾಯಿತಿ ಪಿಡಿಓ ದೇವರನಾವದಗಿಯು ಇಂಗಳೇಶ್ವರ ಗ್ರಾಮ ಪಂಚಾಯತಿಗೆ ಸೇರಿಕೊಂಡ ಮೇಲೆ ಊರೆಲ್ಲಾ ಗಲೀಜೊ ಗಲೀಜು ಆಗಿದೆ. 12 ನೇಯ ಶತಮಾನದಲ್ಲಿ ಟಿಂಗಳೇಶ್ವರ ಎಂಬ ಹೆಸರಿತ್ತು. ಆಮೇಲೆ ಇಂಗಳೇಶ್ವರ ಆಯಿತು.ಇಂತಹ ಒಳ್ಳೆಯ ಊರಿಗೆ ಕಳಂಕ ತರುತ್ತಿರುವ ದೇವರನಾವದಗಿ ಎಂಬ ಪಿಡಿಓ.ಭೀರಲಿಂಗೇಶ್ವರ ದೇವರ ಗುಡಿಯ ಹತ್ತಿರ ಕುಡಿಯುವ ನೀರಿನ ಟ್ಯಾಂಕ್ ಇದ್ದು.ಅದರ ಸುತ್ತ ಕೊಳಚೆಮಯ ಆಗಿರುವುದು ಹಾಗೂ ದಿನಾಲೂ ಸಂಚರಿಸಲು ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದ್ದು.ಇದರಿಂದ ಇಂಗಳೇಶ್ವರ ಗ್ರಾಮವು ಕೊಳಚೆ ನೀರಿನಿಂದ ಆವೃತವಾಗಿದೆ.ಗ್ರಾಮದಲ್ಲಿ ಕೊಳಚೆ ನೀರಿನಲ್ಲಿ ಒದ್ದಾಡೋದು ನಮ್ಮ ಕಷ್ಟ ಯಾರಿಗೆ ಹೇಳಬೇಕು ಎಂದು ಅಲ್ಲಿನ ಸಾರ್ವಜನಿಕರ ಆಕ್ರೋಶದ ಮಾತಾಗಿದೆ. ಚಿಕ್ಕ ಚಿಕ್ಕ ಮಕ್ಕಳು ವಯಸ್ಸಾದ ವೃದ್ಧರು ಈ ರಸ್ತೆ ಮೇಲೆ ಬಿದ್ದು ಗಾಯ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ,ಗ್ರಾಮಸ್ಥರು ಮೌಖಿಕವಾಗಿ ಹಲವು ಬಾರಿ ಪಿಡಿಓರವರಿಗೆ ತಿಳಿಸಿದರು ಸಹ ಯಾವುದೇ ಕ್ರಮ ಇನ್ನುವರೆಗೂ ಜರುಗಿಸಿರುವುದಿಲ್ಲ.
ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ಇದರಿಂದ ಮುಕ್ತಿ ಕೊಡಿಸಿ ಇಲ್ಲಿನ ಜನರಿಗೆ ಅನುಕೂಲ ಮಾಡಿ ಕೊಡುತ್ತಾರಾ ಇಲ್ಲಯೋ ನೋಡಬೇಕಾಗಿದೆ.