ಗಲಗ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವು

ಅರಕೇರಾ,ಮಾ.೧೭- ಗಲಗ ಗ್ರಾಮದಲ್ಲಿ ಗುಡುಗು, ಸಿಡಿಲು ಹಾಗೂ ಆಣೆಕಲ್ಲು ಮಳೆಯಿಂದಾಗಿ ಸಿಡಿಲು ಬಡಿದು ಎತ್ತು ಬಲಿಯಾದ ಘಟನೆ ಅರಕೇರಾ ತಾಲೂಕಿನ ಗಲಗ ಗ್ರಾಮದಲ್ಲಿ ಗುರುವಾರವಾರ ೧೬ರಂದು ಸಂಜೆ೩.೩೦ ಸಂಭವಿಸಿದೆ.
ಸಿಡಿಲು ಬಡಿದು ಗಲಗ ಗ್ರಾಮದ ಹನುಮಂತ ತಂದೆ ಅಮರಯ್ಯ ಗೋಲ್ಲರ ಸರ್ವೇ ನಂಬರ ೨೫೬ರಲ್ಲಿ ಗಿಡದ ಕೆಳಗೆ ಎರಡು ಎತ್ತುಗಳು ಕಟ್ಟಿಹಾಕಲಾಗಿತ್ತು. ಅದರಲ್ಲಿ ಒಂದು ಎತ್ತು ಸಾವನ್ನಪ್ಪಿದೆ. ಮರದ ಕೆಳಗೆ ಕಟ್ಟಿಹಾಕಿದ್ದರಿಂದ ಈ ಅನಾಹುತ ಸಂಭವಿಸಿದೆ.