ಗಲಗ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ

ದೇವದುರ್ಗ.ಮೇ.೨೧-ತಾಲೂಕಿನ ಜಾಲಹಳ್ಳಿ ಹೋಬಳಿಯ ಗಲಗ ಗ್ರಾಮದಲ್ಲಿ ೧೦ದಿನಗಳಿಂದ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಬೇಸಿಗೆಯಲ್ಲಿ ಸಮರ್ಪಕವಾಗಿ ಕುಡಿವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಪಂ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ವಾರ್ಡ್ ಸಂಖ್ಯೆ ೧ರಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮದ ಎಲ್ಲ ವಾರ್ಡ್‌ಗಳಿಗೆ ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ನೀರಿನ ಅಭಾವ ಇರುವುದರಿಂದಾಗಿ ಜನರು ವ್ಯಕ್ತಿಗತ ಅಂತರ ಮರೆತು ಟ್ಯಾಂಕರ್‌ಗಳಗೆ ಮುಗಿ ಬಿದ್ದು ನೀರು ಹಿಡಿಯುತ್ತಿದ್ದಾರೆ. ಇದರಿಂದ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮದ ವಿವಿಧ ವಾರ್ಡ್‌ಗಳಲ್ಲಿ ನೀರು ಸರಬರಾಜು ಮಾಡುವ ಪೈಪ್‌ಗಳು ಹೊಡೆದಿವೆ. ಪೈಪ್ ಖರೀದಿಗೆ ಅಂಗಡಿಗಳು ತೆರೆಯದ ಕಾರಣ ಸಮಸ್ಯೆಯಾಗಿದೆ. ಈಗಾಗಲೇ ಹೊಸ ಪೈಪ್‌ಗಳನ್ನು ಹಾಕಿ ದುರಸ್ಥಿ ಮಾಡಲಾಗಿದೆ. ಶೀಘ್ರದಲ್ಲಿ ಎಲ್ಲ ವಾರ್ಡ್‌ಗಳಿಗೆ ಕುಡಿವ ನೀರಿನ ಸಲಭ್ಯ ಕಲ್ಪಿಸಲಾಗುವುದು.
ರಘುನಂದನ್ ಪೂಜಾರಿ
ಗಲಗ ಗ್ರಾಪಂ ಪಿಡಿಒ