ಗಲಗಲಿಯವರಿಗೆ ಚೆನ್ನಮ್ಮ ಪ್ರಶಸ್ತಿ

ಇಂಡಿ:ಜೂ.21:ಸಾಹಿತ್ಯ ಕ್ಷೇತ್ರದಲ್ಲಿಯ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ದ್ವೀತಿಯ ಮಹಿಳಾ ಯುವ ಸಮ್ಮೇಳನದಲ್ಲಿ ಪಟ್ಟಣದ ಗಂಗಾ ಗಲಗಲಿ ಇವರನ್ನು ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗದ ತಾಲೂಕಿನ ಬ್ಯಾಕೋಡ ಕನಕಶ್ರೀ ಪ್ರಕಾಶನ ಈ ಪ್ರಶಸ್ತಿಯನ್ನು ನೀಡಿದೆ.
ಇಂಡಿಯ ಕದಳಿ ವೇದಿಕೆಯ ಅಧ್ಯಕ್ಷರು, ಪಟ್ಟಣದ ಶ್ರೀ ಸತ್ಯ ಸಾಯಿ ದೇವಸ್ಥಾನ ಸಮಿತಿಯ ಸದಸ್ಯರು ಆದ ಗಂಗಾ ಗಲಗಲಿಯವರು ಸಂಘಟನಾಕಾರರು,ಸೃಜನ ಸಾಹಿತಿಗಳು,ಹಲವಾರು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡಮಾಡಿದವರು ಗಲಗಲಿಯವರು.
ಪ್ರಶಸ್ತಿ ಲಭಿಸಿದ್ದಕ್ಕೆ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.