ಗರ್ಭಿಣಿ ಸ್ತಿಯರಿಗೆ ಪೌಷ್ಠಿಕ ಆಹಾರದ ಅರಿವು

ಚಿತ್ರದುರ್ಗ.ಸೆ.೮; ಸರ್ಕಾರದಿಂದ ದೊರೆಯುವ ಪೋಷಕಾಂಶ ಪದಾರ್ಥಗಳಾದ ಮೊಟ್ಟೆ, ಸೊಪ್ಪು, ಬೆಳೆಕಾಳು, ಸಿರಿದಾನ್ಯಗಳು ಸಮಯಕ್ಕೆ ಸರಿಯಾಗಿ ಗರ್ಭಿಣಿ ಸ್ತಿçÃಯರಿಗೆ ದೊರೆತರೆ, ಮಗು ಮತ್ತು ಗರ್ಭಿಣಿ ಇಬ್ಬರು ಸಹ ಆರೋಗ್ಯವಂತರಾಗಿರುತ್ತಾರೆಂದು ಮಾಜಿ ನಗರಸಭಾ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ, ಸಹಯೋಗದಲ್ಲಿ ನಡೆದ “ಗರ್ಭಿಣಿ ಸ್ತೀಯರಿಗೆ ಪೌಷ್ಠಿಕ ಆಹಾರದ ಅರಿವು ಕಾರ್ಯಕ್ರಮವು” ನಗರದ 15ನೇ ವಾರ್ಡಿನ ಸರ್ಕಾರಿ ಶಾಲೆಯಲ್ಲಿ ಜರುಗಿತು.ಈ ವೇಳೆ ಮಾತನಾಡಿದಡಿ.ಮಲ್ಲಿಕಾರ್ಜುನ್‌ ಅಂಗನವಾಡಿ ಶಿಕ್ಷಕರು, ಕಾರ್ಯಕರ್ತರು ತಾವುಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡದೆ ವಾರ್ಡಿನಲ್ಲಿನ ಗರ್ಭಿಣಿ ಸ್ತಿçÃಯರನ್ನು ಪತ್ತೆಮಾಡಿ ಮತ್ತು ಅವರುಗಳ ಬಗ್ಗೆ ನಿಗಾವಹಿಸಿ, ಆರೋಗ್ಯ ತಪಾಸಣೆ ಮತ್ತು ಪೋಷಕಾಂಶವುಳ್ಳ ಪದಾರ್ಥಗಳು ಎಲ್ಲಾ ಗರ್ಭಿಣಿ ಸ್ತಿçÃಯರಿಗೆ ದೊರೆಯಲೇಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಕ್ಷತ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪ್ರೇಮ.ಟಿ, ಜಿಲ್ಲಾ ನಗರ ವ್ಯವಸ್ಥಾಪಕರಾದ ಅರ್ಜುನ್, ಆಶಾಮೆಂಟರ್, ಪದ್ಮಜಾ, ಹಾಗೂ ಶಾಲಾ ಮುಖ್ಯಶಿಕ್ಷಕಿ ರೇಖಾ ಇದ್ದರು.