ಗರ್ಭಿಣಿ ಮಹಿಳೆಯೊಬ್ಬರಿಗೆ ಆಂಬ್ಯುಲೆನ್ಸ್ ವಾಹನದಲ್ಲಿ ಹೆರಿಗೆ

ಶ್ರೀರಂಗಪಟ್ಟಣ, ಏ. ೫- ಗರ್ಭಿಣಿ ಮಹಿಳೆಯೊಬ್ಬರಿಗೆ ಆಂಬ್ಯುಲೆನ್ಸ್ ವಾಹನದಲ್ಲಿ ಅರಕೆರೆ ಸಮುದಾಯ ಕೇಂದ್ರದ 108 ವಾಹನದ ನರ್ಸ್ ಕಲ್ಯಾಣಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೊಡಿಯಾಲ ಗ್ರಾಮದ ನವೀನ್ ರವರ ಪತ್ನಿ ಪಲ್ಲವಿ ಆಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ. ಕೊಡಿಯಾಲದಿಂದ ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಬೆಳಗಿನ ಜಾವ ಕರೆದೊಯ್ಯುವ ವೇಳೆ ಪಲ್ಲವಿ ಅವರಿಗೆ ಹೊಟ್ಟೆ ನೋವು ತೀವ್ರವಾಗಿದ್ದು, ಕೊತ್ತತ್ತಿ ಬಳಿ ವಾಹನದಲ್ಲೇ ಹೆರಿಗೆ ಆಗಿದ್ದು, ಸಧ್ಯ ತಾಯಿ ಮಗು ಆರೋಗ್ಯದಿಂದ ಇರುವುದಾಗಿ ನರ್ಸ್ ಕಲ್ಯಾಣಿ ತಿಳಿಸಿದ್ದಾರೆ.