ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಂಶಗಳ ಅರಿವು ಅಗತ್ಯ

ಔರಾದ :ಸೆ.28: ವ್ಯಕ್ತಿಯ ಹುಟ್ಟಿನಿಂದ ಆರಂಭವಾಗಿ, ಬೆಳವಣಿಗೆಯ ಪ್ರತಿ ಹಂತದಲ್ಲೂ ಪೌಷ್ಟಿಕಾಂಶ ಅತ್ಯಗತ್ಯ. ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಪೌಷ್ಟಿಕಾಂಶದಿಂದ ಕೂಡಿದ ಆಹಾರ ನೀಡಲೇಬೇಕು. ಈ ನಿಟ್ಟಿನಲ್ಲಿ ತಾಯಂದಿರು ಮೊದಲು ಮಾಡಬೇಕಾದ ಕೆಲಸವೆಂದರೆ ಕನಿಷ್ಠ 6 ತಿಂಗಳವರೆಗಾದರೂ ಮಗುವಿಗೆ ಎದೆಹಾಲು ಉಣಿಸುವುದು. ಇದು ಮಗುವಿನ ಆರೋಗ್ಯಕರ ಜೀವನದ ಮೊದಲ ಮೆಟ್ಟಿಲು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ದೇಶಪಾಂಡೆ ಹೇಳಿದರು

ತಾಲ್ಲೂಕಿನ ಲಕ್ಷ್ಮಿ ನಗರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಿಲಾಯನ್ಸ್ ಫೌಂಡೇಷನ್ ಹಾಗೂ ಔಟರಿಚ್ ಸಂಸ್ಥೆ ಸಹಯೋಗದಲ್ಲಿ ನಡೆದ ಪೆÇೀಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೌಷ್ಟಿಕಾಂಶದ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ಗರ್ಭಿಣಿಯರು ಅರಿತುಕೊಳ್ಳಬೇಕು. ಪೆÇೀಷಕಾಂಶ ಭರಿತ ಆಹಾರ ಸೇವಿಸುವುದರ ಮೂಲಕ ಸಮಸ್ಯೆಯನ್ನು ತಡೆಯಬಹುದು ಎಂದು ತಿಳಿಸಿದರು.

ಬಿಎ???ಓ ಸುನೀಲ ಕಸ್ತೂರೆ ಮಾತನಾಡುತ್ತಾ ಮಹಿಳೆರಲ್ಲಿ ಭ್ರೂಣ ಬೆಳೆಯಲು ಪೆÇ್ರೀಟಿನಾಂಶ ಬಹಳ ಅಗತ್ಯ. ಸಾಮಾನ್ಯ ಮಹಿಳೆಗಿಂತ 15 ಗ್ರಾಂ ಪೆÇ್ರೀಟಿನಾಂಶ ಹೆಚ್ಚಾಗಿರಬೇಕು. ತಾಯಿಯಲ್ಲೂ ಹಾಗೂ ಭ್ರೂಣದಲ್ಲಿ ಉತ್ತಮ ರಕ್ತ ಪರಿಚಲನೆಗೆ ಪೆÇ್ರೀಟಿನ್ ಮತ್ತು ಕಬ್ಬಿಣಂಶ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ರಾಹುಲ ಸಿಂದೆ, ವಲಯ ಮೆಚ್ಚಾರಕಿ ಜಯಶ್ರಿ, ಮುಖ್ಯಗುರು ಶೋಭಾರಾಣಿ, ಯುಎ???ಯ ಓಎನ ಅಂಗನವಾಡಿ ಅಧ್ಯಕ್ಷೆ ಪದ್ಮಾ ಸ್ವಾಮಿ, ಪಿಎಚಸಿಓ ಅರ್ಚನ, ಗ್ರಾ.ಪಂ. ಸದಸ್ಯೆ ಜಗದೇವಿ, ಸುನೀತಾ, ಎಮಬಿಕೆ ಲಲಿತಾ, ಸುದೇಶನಾ, ಸೌಂದರ್ಯ, ಪಾರ್ವತಿ, ಶಾಂತಮ್ಮಾ, ದಾಕ್ಷಯ್ಯಾನಿ, ದಿಪಿಕಾ, ಶಿಲ್ಪಾ, ರಂಗಮ್ಮಾ, ಮೇಘಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತರು, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.