ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಮಾಹಿತಿ

ಮಾನ್ವಿ,ಮೇ.೦೫- ಪೋತ್ನಾಳ ವ್ಯಾಪ್ತಿಯ ಮುದ್ದನಗುಡ್ಡಿ ಗ್ರಾಮದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯದ ಕುರಿತು ತಾಯಿಂದಿರಿಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಯಿತು.
ಗರ್ಭಿಣಿ ಸ್ತ್ರೀಯರು ತಮ್ಮ ಗರ್ಭಿಣಿ ಅವಧಿಯಲ್ಲಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಸುರಕ್ಷಿತ ಹೆರಿಗೆಗಾಗಿ ಆಸ್ಪತ್ರೆಗೆ ಹೋಗಬೇಕು ನಿಮ್ಮ ಮಕ್ಕಳಲ್ಲಿ ಕಂಡುಬರುವ ದಡಾರ ಕಾಯಿಲೆ ಸಾಂಕ್ರಾಮಿಕ ಕಾಯಿಲೆ ಯಾವುದೇ ಮೂಡನಂಬಿಕೆಗೆ ಬಲಿಯಾಗದೆ ತಜ್ಞ ಮಕ್ಕಳ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು ದಡಾರ ಕಾಯಿಲೆ ಮೂಗು ಸೋರುವಿಕೆ ಜ್ವರ ಹಾಗೂ ಮೈ ಮೇಲೆ ಸಣ್ಣ ಗುಳ್ಳೆಗಳು ಬರುವುದು ಸಾಮಾನ್ಯ ಲಕ್ಷಣಗಳು ಇದರ ಬಗ್ಗೆ ಬೇಜವಾಬ್ದಾರಿ ವಹಿಸಬಾರದು ಕ್ಷಯರೋಗ ಕೆಮ್ಮು ಹಸಿವು ಇಲ್ಲದಿರುವುದು ಕಫ್ ದಲ್ಲಿ ರಕ್ತ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿಗಳು ಹನುಮಂತಪ್ಪ ಹೇಳಿದರು. ನಂತರ ತಾಯಿ ಮತ್ತು ಮಕ್ಕಳ ಆರೋಗ್ಯದ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಬಾಲಪ್ಪ ನಾಯಕ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ತಾಯಿಂದಿರು ಹಾಜರಿದ್ದರು.