ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಿ”

.ಚಿತ್ರದುರ್ಗ. ಸೆ.೨೨; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಿತ್ರದರ‍್ಗ ಇವರ ವತಿಯಿಂದ ಚಿತ್ರದರ‍್ಗ ತಾಲೂಕಿನ ಗುಡ್ಡದ ರಂಗವ್ವನಹಳ್ಳಿ ಗ್ರಾಮ ಅಂಗನವಾಡಿ ಕೇಂದದಲ್ಲಿ ನಡೆದ ರಾಷ್ರೀಯ ಪೋಷಣ್ ಅಭಿಯಾನ್ ಕಾರ‍್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ  ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಎನ್, ಸುಧಾ ಮಾತನಾಡುತ್ತಾ ಗರ್ಭಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕು ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳ ಪೋಷಣೆಯನ್ನು ನಮ್ಮ ಇಲಾಖೆ ಸಂಪೂರ್ಣವಾಗಿವಹಿಸಿದೆ ಇಲಾಖೆಯ ಯೋಜನೆಗಳೂಂದಿಗೆ ಸಾರ‍್ವಜನಿಕರು ಕೈಜೋಡಿಸಿದರೆ ಅಪೌಷ್ಟಿಕತೆಯಿಂದ ಪೌಷ್ಟಿಕತೆಗೆ ತೆರಳಬಹುದು ಆಹಾರ ಪದ್ಧತಿಯಲ್ಲಿ ಮೌಡ್ಯತೆಯನ್ನು ತೊಡೆದುಹಾಕಬೇಕು ಗರ್ಭಿಣಿಯರು ಬಾಣಂತಿಯರು ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಮೂಢನಂಬಿಕೆಯಿಂದ ಬಿಡುತ್ತಾರೆ. ಮೌಢ್ಯತೆಯಿಂದ ಹೊರಬಂದು ನಮ್ಮ ಅಂಗನವಾಡಿ ಕರ‍್ಯರ‍್ತರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದರು.ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿಕುಮಾರಿ ಮಂಜುಳಾ ಮಾತನಾಡಿ ಮಹಿಳೆಯರು ಸದೃಢವಾಗಿದ್ದರೆ ಉತ್ತಮ ಆರೋಗ್ಯವಂತ ಮಕ್ಕಳು ಜನಿಸಿ ಆರೋಗ್ಯವಂತ ಭಾರತವನ್ನು ನರ‍್ಮಾಣ ಮಾಡಬಹುದು ವೈದ್ಯರ ಸಹಕಾರ ಬಹಳ ಮುಖ್ಯ ವೈದ್ಯರ ಸಲಹೆ ಸಹಕಾರದೊಂದಿಗೆ ಪೋಷಕಾಂಶವಿರುವ ಆಹಾರವನ್ನು ಸೇವಿಸಿ ಎಂದು ಕಿವಿಮಾತು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಡಾ. ಗೀತಾಂಜಲಿ ಮಾತನಾಡಿ ಆರೋಗ್ಯದಲ್ಲಿ ಏರುಪೇರಾದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯಿರಿ ಪೋಷಕಾಂಶಯುಕ್ತ ವಾಗಿರುವ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ ಎಂದರು. ಇದೇ ವೇಳೆ ಮಹಿಳಾ ಫಲಾನುಭವಿಗಳಿಗೆ ಸೀಮಂತ ಕಾರ‍್ಯವನ್ನು ನೆರವೇರಿಸಲಾಯಿತು ಹಣ್ಣು ಮತ್ತು ತರಕಾರಿಗಳಿಂದ ಆರ‍್ಷಕವಾದ ಚಿತ್ತಾರವನ್ನು ಬಿಡಿಸಲಾಗಿತ್ತು, ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶ್ಯಾಮಾಲಾ ರವರು ವಹಿಸಿದ್ದರು ವೇದಿಕೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಶಾಲೆಯ ಮುಖ್ಯೋಪಾಧ್ಯಾಯರಾದ.. ನೇತ್ರಾವತಿ, ಶ್ರೀಸಿರಿಸಂಪಿಗೆ ಸಂಸ್ಥೆಯ ಕಾರ್ಯದರ್ಶಿ ಡಿ  ಕುಮಾರ್.ಅಂಗನವಾಡಿ ಕಾರ‍್ಯರ‍್ತರು ಆಶಾ ಕಾರ‍್ಯರ‍್ತೆಯರು ಫಲಾನುಭವಿಗಳು ಉಪಸ್ಥಿತರಿದ್ದರುA