ಗರ್ಭಗುಡಿ ಯೋಜನೆಗೆ ನೂರೆಂಟು ವಿಘ್ನ’ ಟೆಂಡರ್ ಅವಧಿ ಮುಗಿದ ನಂತರ ಗುತ್ತಿಗೆದಾರರಿಗೆ ಹಣ ಬಿಡುಗಡೆ- ಲೋಕಾಯುಕ್ತಕ್ಕೆ ದೂರು ಸತೀಶ್ ಕುಮಾರ್.ಎಸ್.ಎನ್

ಹರಪನಹಳ್ಳಿ.ಮಾ.೨೭; ತಾಲ್ಲೂಕಿನ ಗರ್ಭಗುಡಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ್ದ `ಗರ್ಭಗುಡಿ ಕಿರು ಜಲಾಶಯ ನಿರ್ಮಾಣ’ ಯೋಜನೆಗೆ ಎರಡು ದಶಕ ಕಳೆದರೂ ಪೂರ್ಣ ಪ್ರಮಾಣದ ಕಾಮಗಾರಿಗೆ ಚಾಲನೆ ಸಿಗದೇ ನೂರೆಂಟು ವಿಘ್ನಗಳು ಕಾಡುತ್ತಿವೆ. 
ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರ ಕನಸಿನ ಕೂಸಾದ ಈ ಯೋಜನೆಗಾಗಿ 1998ರಲ್ಲಿ 9.30ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರವರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿAದ ಯೋಜನೆಯನ್ನು ಜನ ಪ್ರತಿನಿಧಿಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದರೇ ವಿನಃ ಯಾರು ಪೂರ್ಣಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಿರಲಿಲ್ಲ. ಆದರೆ 2018ರಲ್ಲಿ ಮಾಜಿ ಶಾಸಕ ದಿ.ಎಂ.ಪಿ.ರವೀAದ್ರ ಅವರು ಹಠಕ್ಕೆ ಬಿದ್ದು, ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಅಂತ ಇದ್ದ ಯೋಜನೆಯನ್ನು ಬಿಡ್ಜ್ ಕಂ ಪೀಕಪ್ ಅಂತ ಬದಲಾಯಿಸಿ 54 ಕೋಟಿರೂ ವೆಚ್ಚಕ್ಕೆ ಹೊಸ ತಾಂತ್ರಿಕ ಅನುಮೋದನೆ ಪಡೆದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾಧನಾ ಸಮಾವೇಶದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿದ್ದರು. 
ಬೆಂಗಳೂರು ಮೆ.ಅಮೃತ ಕನಸ್ಟçಕ್ಷನ್ ಕಂಪನಿಯು 54 ಕೋಟಿರೂಗಳಿಗೆ ಕಳೆದ 14-06-2018ರಂದು ಒಡಂಬಡಿಕೆ ಮಾಡಿಕೊಂಡಿದೆ. ಸದರಿ ಅಗ್ರಿಮೆಂಟ್ ಪ್ರಕಾರ 18 ತಿಂಗಳ ಕಾಲಾವಧಿಯೊಳಗೆ ಕಾಮಗಾರಿ ಮುಗಿಸಬೇಕಿತ್ತು. ಆದರೆ ಅವದಿ ಮುಗಿದು ಒಂದುವರೆ ವರ್ಷ ಗತಿಸಿದರೂ ಕಾಮಗಾರಿ ಆರಂಭಿಸದ್ದಿದ್ದರೂ ಗುತ್ತಿಗೆದಾರರಿಗೆ 9.84 ಕೋಟಿರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಲಾವದಿ ಮುಗಿದ್ದರೂ ಕೆಲಸ ಆರಂಭಿಸದೇ ಹಣವನ್ನು ಪಡೆದಿರುವ ಗುತ್ತಿಗೆದಾರರು ಹಾಗೂ ಲೋಪವೆಸಗಿದ ಅದಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಲೋಕಾಯುಕ್ತ ನ್ಯಾಯಲಯಕ್ಕೆ ದೂರು ಸಲ್ಲಿಸಲಾಗಿದೆ. 
ಕಾಮಗಾರಿಯ ಟೆಂಡರ್ ಅವದಿ ಮುಗಿದಿರುವುದರಿಂದ ಗುತ್ತಿಗೆದಾರರ ಕಾಲಾವದಿ ವಿಸ್ತರಣೆ ಮಾಡಿಕೊಳ್ಳಬೇಕಿತ್ತು ಅಥವಾ ಹೊಸದಾಗಿ ಟೆಂಡರ್ ಕರೆಯಬೇಕಿತ್ತು ಆದರೆ ಇದು ಯಾವುದನ್ನು ಮಾಡದೇ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಮುಂಚಿತವಾಗಿ ಬಿಡುಗಡೆ ಮಾಡಲಾದ ಮೊತ್ತಕ್ಕೆ ಸರಿದೂಗಿಸಲು ಇದೀಗ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಸ್ಥಳದಲ್ಲಿ ಕಾಮಗಾರಿಗೆ ಸಂಬAದಿಸಿದ ಸಾಮಾಗ್ರಿ ಸಂಗ್ರಹಿಸಿ, ಒಂದು ಕಡೆ ಪೀಲ್ಲರ್‌ಗಾಗಿ ಕಬ್ಬಿಣ ಕಟ್ಟಲಾಗಿದೆ. ಏನೇ ಪ್ರಶ್ನೆ ಕೇಳಿದರೂ ಸಣ್ಣ ನೀರಾವರಿ ಇಲಾಖೆಯ ಅದಿಕಾರಿಗಳು ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. 
ಕುಡಿಯುವ ನೀರು, ನೀರಾವರಿ, ಸಂಪರ್ಕ ಸೇತುವೆ, ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ ವಿವಿಧೋದ್ದೇಶಗಳನ್ನು ಯೋಜನೆ ಒಳಗೊಂಡಿದ್ದು, ಬಿಡ್ಜ್ ನಿರ್ಮಾಣದಿಂದ ನದಿಪಾತ್ರದಲ್ಲಿ 19 ಕಿ.ಮೀ ಉದ್ದಕ್ಕೂ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹಗೊಳ್ಳಲಿದೆ. ತಾಲ್ಲೂಕಿನ ಹಲವಾಗಲು, ಕಡತಿ, ನಂದ್ಯಾಲ, ನಿಟ್ಟೂರು, ತಾವರಗೊಂದಿ ಹಾಗೂ ರಾಣೇಬೆನ್ನೂರು ತಾಲ್ಲೂಕಿನ ಕೆಲವು ಗ್ರಾಮಗಳು ಸೇರಿ ಒಟ್ಟು 3,100 ಎಕರೆ ರೈತರ ಭೂಮಿಗೆ ನೀರುಣಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ. ಹರಪನಹಳ್ಳಿ-ರಾಣೇಬೆನ್ನೂರು ತಾಲ್ಲೂಕುಗಳ ನಡುವೆ ಪ್ರಯಾಣಿಸಲು 25 ಕಿ.ಮೀ ಅಂತರ ಕಡಿಮೆಯಾಗಲಿದೆ. ಹರಪನಹಳ್ಳಿ-ಕೊಟ್ಟೂರು-ರಾಣೇಬೆನ್ನೂರು ನಡುವಿನ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. 
ಅದಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಟೆಂಡರ್ ಅವದಿ ಮುಗಿದ್ದರೂ ಕೆಲಸ ಪ್ರಾರಂಭಿಸದ ಗುತ್ತಿಗೆದಾರರಿಗೆ ದಂಡ ಹಾಕುವ ಬದಲು ಹಣ ಬಿಡುಗಡೆ ಮಾಡಿದ್ದಾರೆ. ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ನಂತರ ತರಾತುರಿಯಲ್ಲಿ ಕಾಮಗಾರಿ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ. 2018ರ ದರ ಪಟ್ಟಿಯಂತೆ ಕ್ರಿಯಾಯೋಜನೆವಿದ್ದು, ಮೂರು ವರ್ಷದ ಹಿಂದೆ ಇದ್ದ ದರಕ್ಕೂ ಈಗಿರುವ ದರಕ್ಕೂ ವ್ಯತ್ಯಾಸವಿದೆ. ಹೀಗಾಗಿ ಕಳಪೆ ಕಾಮಗಾರಿ ಮಾಡುವ ಅನುಮಾನವಿದೆ. ಕಳೆದ ಎರಡು ತಿಂಗಳ ಹಿಂದೆಯೇ ಲೋಕಾಯುಕ್ತ ನ್ಯಾಯಲಯಕ್ಕೆ ದೂರು ಸಲ್ಲಿಸಿದ್ದು, ಪ್ರಕರಣ ನ್ಯಾಯಲಯದಲ್ಲಿರುವಾಗ ಕಾಮಗಾರಿ ನಡೆಸುವುದು ಅಪರಾಧವಾಗುತ್ತದೆ ಎನ್ನುತ್ತಾರೆ ದೂರುದಾರರಾದ ಟಿ.ಶ್ರೀಧರ್ ಮತ್ತು ಸತೀಶಕುಮಾರ್. 


ಗರ್ಭಗುಡಿ ಬಿಡ್ಜ್ ಕಂ ಪೀಕಪ್ ಯೋಜನೆ ಕಾಮಗಾರಿಗೆ ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸಿ ಶೀಘ್ರವೇ ದಿನಾಂಕ ಪಡೆದು ಶಂಕುಸ್ಥಾಪನೆ ಮಾಡುತ್ತೇವೆ. ಈಗಾಗಲೇ ಕಾಮಗಾರಿ ಆರಂಭಿಸಲು ಸಂಬAಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವ ಕುರಿತು ಅದಿಕಾರಿಗಳು ಉತ್ತರ ನೀಡುತ್ತಾರೆ.  -ಜಿ.ಕರುಣಾಕರರೆಡ್ಡಿ, ಶಾಸಕರು 

ಗರ್ಭಗುಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಬಿಡ್ಜ್ಗೆ ಪಿಲ್ಲರಸ್ಸ್ ಅಳವಡಿಸುವ ಹಂತದಲ್ಲಿದೆ. ಗುತ್ತಿಗೆದಾರರಿಗೆ ಕಾಲಾವಧಿ ವಿಸ್ತರಿಸುವಂತೆ ಅಧೀಕ್ಷ ಇಂಜಿನಿಯರ್ ಕಚೇರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಚಿತ್ರದುರ್ಗ ವಿಭಾಗದಿಂದ ಗುತ್ತಿಗೆದಾರರಿಗೆ ಮುಂಗಡ ಅನುದಾನ ಬಿಡುಗಡೆಯಾಗಿದೆ. ನಂತರ ಬಳ್ಳಾರಿ ವಿಭಾಗಕ್ಕೆ ಹರಪನಹಳ್ಳಿ ವರ್ಗಾವಣೆ ಮಾಡಲಾಗಿದೆ. ಕಾಮಗಾರಿ ಕುರಿತು ಲೋಕಾಯುಕ್ತ ಅದಿಕಾರಿಗಳು ನೋಟಿಸ್ ನೀಡಿದ್ದು, ಅದಕ್ಕೆ ಉತ್ತರ ಕೊಟ್ಟಿದ್ದೇವೆ. ಆದರೆ ಮುಂದಿನ ಕ್ರಮದ ಬಗ್ಗೆ ಸದ್ಯ ಏನೂ ಮಾಹಿತಿ ಇಲ್ಲ. 
 -ಜೆ.ವೆಂಕೋಬಆಚಾರ್, ಇಇ ಸಣ್ಣ ನೀರಾವರಿ ಇಲಾಖೆ, ಬಳ್ಳಾರಿ