ಗರ್ಬಾ ನೃತ್ಯ ವೇಳೆ ಹೃದಯಾಘಾತ:೧೦ ಮಂದಿ ಸಾವು

ಗಾಂಧಿನಗರ, ಅ. ೨೨- ಕಳೆದ ೨೪ ಗಂಟೆಗಳಲ್ಲಿ ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ನವರಾತ್ರಿ ಆಚರಣೆಯಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದ ಹತ್ತು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ನಡೆದಿದೆ.
ಗುಜರಾತ್‌ನಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಗರ್ಬಾ ನೃತ್ಯ ಮಾಡುವಾಗ ಕನಿಷ್ಠ ೧೦ ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲ ಹದಿಹರೆಯದವರಿಂದ ಮಧ್ಯವಯಸ್ಕರಾಗಿದ್ದಾರೆ. ಅದರಲ್ಲಿ ವರ್ಷದ ಬರೋಡಾದ ದಾಭೋಯ್‌ನ ೧೩ ವರ್ಷದ ಹುಡುಗ ಕೂಡ ಮೃತಪಟ್ಟಿದ್ದಾನೆ.
ಅಹಮದಾಬಾದ್‌ನ ೨೪ ವರ್ಷದ ಯುವತಿ ಗಾರ್ಬಾ ಆಡುತ್ತಿದ್ದಾಗ ಹಠಾತ್ ಕುಸಿದು ಸಾವನ್ನಪ್ಪಿದ್ದಾನೆ. ಅದೇ ರೀತಿ ಕಪದ್ವಾಂಜ್‌ನ ೧೭ ವರ್ಷದ ಬಾಲಕ ಕೂಡ ಗಾರ್ಬಾ ಆಡುವಾಗ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ ಇದೇ ರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
ಗುಜರಾತ್‌ನ ಗಾರ್ಬಾ ಸಂಘಟಕರು ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಜನರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದಾರೆ.
ದಾಖಲೆ ಕರೆಗಳು:
ನವರಾತ್ರಿಯ ಮೊದಲ ಆರು ದಿನಗಳಲ್ಲಿ, ೧೦೮ ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿಗೆ ೫೨೧ ಕರೆಗಳು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ ೬೦೯ ಕರೆಗಳು ಬಂದಿವೆ. ಗಾರ್ಬಾ ಆಚರಣೆಗಳು ಸಾಮಾನ್ಯವಾಗಿ ನಡೆಯುವ ಸಂಜೆ ೬ ರಿಂದ ೨ ಗಂಟೆಯ ನಡುವೆ ಈ ಕರೆಗಳನ್ನು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಆತಂಕಕಾರಿ ಪ್ರವೃತ್ತಿಯಿಂದ ಸರ್ಕಾರ ಮತ್ತು ಈವೆಂಟ್ ಆಯೋಜಕರು ಕ್ರಮ ಕೈಗೊಳ್ಳಲು ಪ್ರೇರೇಪಿಸಿದೆ.
ಇದಲ್ಲದೆ, ಗಾರ್ಬಾ ಸಂಘಟಕರು ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದಾರೆ. ತಮ್ಮ ಸಿಬ್ಬಂದಿಗೆ ಸಿಪಿಆರ್ ತರಬೇತಿ ನೀಡಲು ಮತ್ತು ಭಾಗವಹಿಸುವವರಿಗೆ ಸಾಕಷ್ಟು ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸಲಹೆ ನೀಡಲಾಗಿದೆ.

ರಾಜ್ಯ ಸರ್ಕಾರ ಸೂಚನೆ
ಕಳೆದ ೨೪ ಗಂಟೆಗಳಲ್ಲಿ ೧೦ ಮಂದಿ ಗಾರ್ಬಾ ನೃತ್ಯ ಮಾಡುವ ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಗಾರ್ಬಾ ಸ್ಥಳಗಳ ಸಮೀಪವಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಎಚ್ಚರಿಕೆ ನೀಡಿದ್ದು, ಹೆಚ್ಚಿನ ಜಾಗರೂಕರೂಕತೆ ವಹಿಸಲು ಸೂಚಿಸಿದೆ.
ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಿಗೆ ಈವೆಂಟ್‌ಗಳಿಗೆ ತ್ವರಿತವಾಗಿ ಪ್ರವೇಶಿಸಲು ಕಾರಿಡಾರ್‌ಗಳನ್ನು ರಚಿಸಲು ಗರ್ಬಾ ಸಂಘಟಕರಿಗೆ ಸೂಚನೆ ನೀಡಲಾಗಿದೆ.