ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ೩ ಲಕ್ಷ ಕೋಟಿ ವೆಚ್ಚ

ನವದೆಹಲಿ,ನ.೨೧-ಉಚಿತ ಆಹಾರಧಾನ್ಯ ಯೋಜನೆ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಹಾಧನದ ಮೊತ್ತ ೩ ಲಕ್ಷ ಕೋಟಿ ದಾಟುವ ಸಾಧ್ಯತೆಯಿದೆ ಇದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ.
ಈ ಹಿಂದೆ ನಿಗದಿ ಪಡಿಸಿದ್ದ ಅಂದಾಜು ೨ ಲಕ್ಷ ಕೋಟಿಗಿಂತ ಸುಮಾರು ಶೇ. ೫೦ ರಷ್ಡು ಹೆಚ್ಚು ಎಂದು ಹೇಳಲಾಗಿದೆ.ಸಮಾರು ೮೦ ಕೋಟಿ ಜನರಿಗೆ ಹೆಚ್ಚು ಸಹಾಯಧನ ಮತ್ತು ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿಂದೆ ೨೦೨೦-೨೧ರಲ್ಲಿ ಬಜೆಟ್‌ನಲ್ಲಿ ಗರಿಷ್ಠ ಮೊತ್ತ ೫.೨ ಲಕ್ಷ ಕೋಟಿ ರೂ. ಆದರೆ ನಿಧಿಯಡಿ ರೂ ೩೪ ಲಕ್ಷ ಕೋಟಿ ರೂಪಾಯಿಯನ್ನು ಭಾರತೀಯ ಆಹಾರ ನಿಗಮ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ಪಡೆದ ಸಾಲ ಇತ್ಯರ್ಥಗೊಳಿಸಲು ಬಳಸಲಾಗಿದೆ ಎಂದು ತಿಳಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ಅಹಾರ ನಿಗಮದ ಬಡ್ಡಿಯ ಹೊರೆ ಕಡಿಮೆ ಮಾಡಿದ್ದು ಆಹಾರ ಧಾನ್ಯಗಳ ಆರ್ಥಿಕ ವೆಚ್ಚ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಏಳನೇ ಬಾರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಿದೆ ಮತ್ತು ಸಹಾಯಧನ ಇನ್ನೂ ೧.೨ ಲಕ್ಷ ಕೋಟಿಗಳಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯಡಿ ಕೇಂದ್ರ, ಸರ್ಕಾರ ಮಾಸಿಕ ೫ ಕೆಜಿ ಉಚಿತ ಆಹಾರ ಧಾನ್ಯ ಒದಗಿ ಸುತ್ತದೆ ಫಲಾನುಭವಿಗೆ ೫ ಕೆಜಿ ಗೋಧಿ ಮತ್ತು ಅಕ್ಕಿಗೆ ಹೆಚ್ಚುವರಿಯಾಗಿ ನೀಡ ಲಾಗುವುದು ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ತಿಂಗಳು ಒದಗಿಸುತ್ತದೆ.ಈ ಯೋಜನೆಯನ್ನು ಕೇಂದ್ರ ಸರ್ಕಾರ ೨೦೨೦ ರ ಏಪ್ರಿಲ್‌ನಲ್ಲಿ ಯೋಜನೆಯನ್ನು ಪ್ರಾರಂಭಿಸಿತು.
ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಆಹಾರ ಸಚಿವಾಲಯ ಉಚಿತ ಆಹಾರ ಧಾನ್ಯ ನೀಡುವ ಯೋಜನೆ ಕೈಗೆತ್ತಿಕೊಂಡಿದೆ. ಇದುವರೆಗೆ ಎಲ್ಲಾ ಏಳು ಹಂತಗಳಲ್ಲಿನ ಒಟ್ಟು ಸುಮಾರು ೩೯ ಲಕ್ಷ ರೂ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಗಿದೆ.