
ಬಳ್ಳಾರಿ: ದೇಶದಲ್ಲಿ ಗರೀಬಿ ಹಟಾವೋ ಅಂದ್ರು ಕಾಂಗ್ರೆಸ್ ನವರು ಆದರೆ ಅದು ಆಗಲಿಲ್ಲ. ಅದಾಗಿದ್ದರೆ ಈಗ ಗ್ಯಾರಂಟಿ, ಗ್ಯಾರಂಟಿ ಎಂದು ಬರುತ್ತಿರಲಿಲ್ಲ ಎಂದು ಕೆಪಿಸಿಸಿ ಘೋಷಣೆ ಮಾಡಿರುವ ಗ್ಯಾರೆಂಟಿ ಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಲೇವಡಿ ಮಾಡಿದ್ದಾರೆ.
ಅವರು ಇಂದು ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಗಳ
ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಡುತ್ತಿದ್ದರು. 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಸಾವಿರಾರು ಘೋಷಣೆ ಮಾಡಿದ್ದಾರೆ.ಹಲವು ದಶಕಗಳ ಕಾಲ ಆಡಳಿತ ಮಾಡಿದ್ದಾರೆ ಹೊರತು ಯಾವುದೇ ಘೋಷಣೆ ಈಡೇರಿಲ್ಲ ಎಂದು ಅಸರೋಪಿಸಿದರು.

ಕಾಂಗ್ರೆಸ್ ಘೋಷಣೆ ಮಾಡಿದ ಯೋಜನೆಗಳು ಜಾರಿಯಾಗಿದ್ದರೆ ದೇಶದಲ್ಲಿ ಬಡವರು ಇರುತ್ತಿರಲಿಲ್ಲ. ದೆಹಲಿಯಲ್ಲಿ ಘೋಷಣೆ ಮಾಡಿದ ಯೋಜನೆ ಹಳ್ಳಿಗೆ ಬರಬೇಕಾದ್ರೆ. ಕೇವಲ ಹತ್ತು ಪರ್ಸೆಂಟ್ ಉಳಿತಿತ್ತು ಎಂದು ಆ ಪಕ್ಷದ ಪ್ರಧಾನಿ
ರಾಜೀವ್ ಗಾಂಧಿ ಅವರೇ ಅಸಾಹಯಕತೆ ವ್ಯಕ್ತಪಡಸಿದ್ದರೆಂದು ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರು.
ಬಿಜೆಪಿಯಲ್ಲಿ ಚಾಹ ಮಾರಾಟ ಮಾಡಿದ ವ್ಯಕ್ತಿ ಪ್ರಧಾನಿಯಾದ್ರು. ಬೇರೆ ಮನೆಯಲ್ಲಿ ಕೆಲಸ ಮಾಡಿ ಅವರ ತಾಯಿ ಅವರನ್ನು ಸಾಕಿದ್ರು. ಬಡತನವನ್ನು ಅನುಭವಿಸಿ ಬಂದ ಮೋದಿಯವರು ಬಡವರಿಗಾಗಿ ಹಲವು ಯೋಜನೆ ತಂದಿದ್ದಾರೆ. ತರುತ್ತಿದ್ದಾರೆ. ನಿರಾಧಾರವಾಗಿದ್ದ ಆಧಾರ್ ಕಾರ್ಡ್ ಗೊಂದು ರೂಪುರೇಷೆ ಮಾಡಿದ್ದೇವೆ. ಬ್ಯಾಂಕ್ ಅಕೌಂಟ್ ಮಾಡಿ ಎಂದಾಗ ಅದೆಷ್ಟೋ ಜನರು ನಕ್ಕರು. ಆದ್ರೇ ಕೋಟಿಗಟ್ಟಲೇ ಬ್ಯಾಂಕ್ ಅಕೌಂಟ್ ಓಪನ್ ಅದವು. ಅಕೌಂಟ್ ಓಪನ್ ಮಾಡಿರೋ ಉದ್ದೇಶದಿಂದಾಗಿ ಇದೀಗ ನೇರವಾಗಿ ಹಣ ಫಲಾನುಭವಿಯ ಅಕೌಂಟ್ ಗೆ ಸೇರಿತ್ತಿದೆ.
ಈ ಹಿಂದೆ ಫಲಾನುಭವಿಗಳು ಬಳಿ ಕಮಿಷನ್ ಕೊಡಬೇಕಾಗುತ್ತಿತ್ತು. ಆದ್ರೇ ಇದೀಗ ಪಾರದರ್ಶಕತೆ ಇದೆ, ಸೋರಿಕೆ ಇಲ್ಲ. ಡಿಬಿಟಿ ಮಾಡಿದ ಪರಿಣಾಮ
ಮಧ್ಯವರ್ತಿಗಳ ಹಾವಳಿ ಇಲ್ಲದೇ ಕೋಟಿಗಟ್ಟಲೇ ಹಣ ಉಳಿಯುತ್ತಿದೆ. ಮೊಬೈಲ್ ಬ್ಯಾಂಕಿಂಗ್ ಮಾಡಬೇಕೆಂದಾಗ ಟೀಕೆ ಮಾಡಲಾಯ್ತು. ಇದೀಗ ಕಪ್ಪು ಹಣ ಕಡಿಮೆಯಾಗುತ್ತದೆಂದರು
ಕಾಂಗ್ರೆಸ್ ಕೊಟ್ಟ ಪಿಡಿಗು ಭ್ರಷ್ಟಾಚಾರ. ಜೀಪ್ ಹಗರಣ ಬೋಪೊರ್ಸ್ ಹಗರಣ. ಬೋಪರ್ಸ್ ಹಗರಣ, 2 ಜಿ ಹಗರಣ, ಕಲ್ಲಿದಲು ಹಗರಣ ಹೀಗೆ ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ನವರು.
ಕೊರೊನಾ ವೇಳೆ ನಲವತ್ತು ಲಕ್ಷ ಜನರು ಸಾಯ್ತಾರೆ ಎಂದು ಊಹಿಸಲಾಗಿತ್ತು. ಹಸಿವಿನಿಂದ ಸಾಯ್ತಾರೆ ಅಂದ್ರು. ಆದ್ರೇ, ವ್ಯಾಕ್ಸಿನ್ ಕಂಡುಹಿಡಿಯೋ ಮೂಲಕ ವ್ಯಾಕ್ಸಿನೇಷನ್ ನೀಡೋ ಮೂಲಕ ಕೊರೊನಾದಿಂದ ಮುಕ್ತವಾಗಿದ್ದೇವೆಂದರು.
ಕುಕ್ಕರ್ ಬಾಂಬ್ ಸ್ಟೋಟ ಮಾಡಿದ್ದು ನಾವೇ ಎಂದು ಐಸಿಎಸ್ ಉಗ್ರರು ಒಪ್ಪಿಕೊಂಡಿದ್ದಾರೆ. ಆದರೆ ಅಂದು ಡಿ.ಕೆ.ಶಿವಕುಮಾರ್ ಅಟೆನ್ಷನ್ ಡೈವರ್ಟ್ ಎನ್ನುವ ಮೂಲಕ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆಂಬಲಿಸುವಂತೆ ಮಾತನಾಡಿದ್ದರು.ಈಗ ಡಿಕೆಶಿ ಇದಕ್ಕೆ ಏನು ಹೇಳ್ತಾರೆ ಕೂಡಲೇ ಕ್ಷಮೆ ಹೇಳಬೇಕೆಂದು ಅಗ್ರಹಿಸಿದರು.
ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ. ಅಧುನಿಕ ಡಿಜಿಟಲ್ ಯುಗದಲ್ಲಿ ಫಲಾನುವಿಗಳ ಖಾತೆಗೆ ನೇರ ಹಣ ಹೋಗ್ತದೆ. ಯಾವುದೇ ಮೋಸ ವಾಗೋದಿಲ್ಲ.ಸರ್ವತೋಮುಖ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ. ಕಟ್ಟ ಕಡೆಯ ಜನರಿಗೆ ಸರ್ಕಾರದ ಸೌಲಭ್ಯ ಸಿಗಬೇಕೆನ್ನುವುದೇ ಕೇಂದ್ರ ರಾಜ್ಯ ಸರ್ಕಾರದ ಗುರಿ. ನೂತನ ವಿಜಯನಗರ ಜಿಲ್ಲೆಗೆ 6,173 ಕೋಟಿ ಅನುದಾನ ಬಂದಿದೆ. ಮೋದಿ ಮತ್ತು ಬಸವರಾಜ್ ಬೊಮ್ಮಯಿ ಅವರು ಮಹಿಳೆರ ಬಗ್ಗೆ ಸಾಕಷ್ಟು ಯೋಜನೆ ತಂದಿದ್ದಾರೆ. ಈ ಮೂಲಕ ಹುಟ್ಟಿದ ಹೆಣ್ಣು ಮಗು ದರಿದ್ರ ಲಕ್ಷ್ಮೀ ಅಲ್ಲ ಭಾಗ್ಯ ಲಕ್ಷ್ಮೀ ಎನ್ನುವ ಸಂದೇಶ ನೀಡಿದ್ದಾರೆಂದರು.
ಸಭೆಯಲ್ಲಿ ಸಚಿವ ಆನಂದ್ ಸಿಂಗ್, ಹಾಲಪ್ಪ ಆಚಾರ್, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಸಂಸದ ದೇವೇಂದ್ರಪ್ಪ ಮೊದಲಾದವರು ಇದ್ದರು.