ಗರೀಗೆದರಿದ ಲೋಕಸಭಾ ಚುನಾವಣೆ.ಕಾಂಗ್ರೇಸ್ ಟಿಕೇಟ ಬೇಡಿ ಗಜಾನನ ಮಂಗಸೂಳಿ ಅರ್ಜಿ ಸಲ್ಲಿಕೆ

ಅಥಣಿ :ಡಿ.28: 2024-ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಮುಖಂಡರಾದ ಗಜಾನನ ಮಂಗಸೂಳಿ ಅವರು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಇವರಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿದರು
ಈ ವೇಳೆ ಗಜಾನನ ಮಂಗಸೂಳಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗುವ ಸಂಭವನೀಯತೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದು ನಮ್ಮ ಹೈಕಮಾಂಡ ಈ ಸಲ ನನಗೆ ಟಿಕೇಟ್ ಕೊಡುತ್ತಾರೆಂಬ ವಿಶ್ವಾಸವಿದೆ.
2019 ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಅತೀ ಹೆಚ್ಚು ಮತಗಳನ್ನು ಪಡೆದ ನನಗೆ ಈ ಬಾರಿ ಅಥಣಿ ವಿಧಾನಸಭೆ ಟಿಕೇಟ್ ಸಿಗುವ ಸಂಭಾವ್ಯ ಇದ್ದರೂ ಕೂಡ ಹೈಕಮಾಂಡ್ ಮಾತಿನ ಮೇರೆಗೆ ತ್ಯಾಗ ಮಾಡಿದ್ದೇನೆ ಆದರೆ ಈ ಸಲ ನನಗೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಿಂದ ಟಿಕೇಟ್ ಸಿಗುತ್ತದೆ ಎಂದು ಮುಖಂಡ ಗಜಾನನ ಮಂಗಸೂಳಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ರಾವಸಾಬ ಐಹೊಳೆ, ಅಥಣಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಉಮರ್ ಸೈಯದ್. ಉಪಸ್ಥಿತರಿದ್ದರು.