ಗರಿಷ್ಠ ಮಟ್ಟ ತಲುಪಿದ ವಿಮಾನ ಪ್ರಯಾಣಿಕರ ಸಂಖ್ಯೆ

ನವದೆಹಲಿ,ಏ.೨೩- ಬೆಂಗಳೂರು, ದೆಹಲಿ, ಮುಂಬೈ, ಮತ್ತು ಹೈದರಾಬಾದ್‌ನ ಸೇರಿದಂತೆ ದೇಶದ ದೊಡ್ಡ ನಗರ ವಿಮಾನ ನಿಲ್ದಾಣಗಳಲ್ಲಿ ವಾರ್ಷಿಕ ಪ್ರಯಾಣಿಕರ ದಟ್ಟಣೆ ಕೋವಿಡ್ ಪೂರ್ವದಲ್ಲಿ ಇದ್ದ ಪ್ರಯಾಣಿಕ ರೀತಿ ಗರಿಷ್ಠ ಮಟ್ಟ ತಲುಪಿದೆ
ವಿಮಾನ ನಿಲ್ದಾಣಕ್ಕೆ ಬಂದು ಹೊರಡುವ ವಿಮಾನಗಳ ಸಂಖ್ಯೆ ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಿಳಿಸಿದೆ.
ಕೋವಿಡ್ ಸೋಂಕು ಕಾಣಿಸಿಕೊಳ್ಳುವುದಕ್ಕೂ ಮುನ್ನ ದೇಶದಲ್ಲಿ ವಿಮಾನಯಾನ ಸಂಖ್ಯೆ ಗರಿಷ್ಠ ಮಟ್ಟದಲ್ಲಿತ್ತು ಎಂದು ವಾಯು ಸಂಚಾರ ಮಾಹಿತಿ ಆಧರಿಸಿ ಈ ವಿಷಯ ತಿಳಿಸಿದೆ
ಭಾರತೀಯ ನಗರದ ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ಮುಂಬೈ ವಿಮಾನ ನಿಲ್ದಾಣ ಸತತ ಮೂರನೇ ವರ್ಷಕ್ಕೆ ವರ್ಷದಿಂದ ವರ್ಷಕ್ಕೆ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆಯ ಬೆಳವಣಿಗೆ ದಾಖಲಿಸಿದೆ ಎಂದು ಅಂಕಿ ಅಂಶಗಳು ತಿಳಿಸಿವೆ
೨೦೨೩ರ ಏಪ್ರಿಲ್ ತಿಂಗಳಿನಿಂದ ೨೦೨೪ರ ಮಾರ್ಚ್ ರವರೆಗೆ, ಮುಂಬೈ ವಿಮಾನ ನಿಲ್ದಾಣದಿಂದ ಸುಮಾರು ೫.೩ ಕೋಟಿ ಪ್ರಯಾಣಿಕರು ವಿವಿಧ ಕಡೆ ಪ್ರಯಾಣ ಬೆಳೆಸಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ ೨೦ ರಷ್ಟು ಜಿಗಿತ ಕಂಡಿದೆ ಎಂದು ಹೇಳಿದೆ
ದೇಶದ ಅತಿದೊಡ್ಡ ವಿಮಾನ ನಿಲ್ದಾಣವಾದ ದೆಹಲಿಯಲ್ಲಿ ಸುಮಾರು ೭.೪ ಕೋಟಿ ಪ್ರಯಾಣಿಕರನ್ನು ನಿಭಾಯಿಸಿದೆ ಮತ್ತು ಶೇಕಡಾ ೧೩ ರಷ್ಟು ಬೆಳವಣಿಗೆ ದಾಖಲಿಸಿದೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ೩.೭ ಕೋಟಿ ಪ್ರಯಾಣಿಕರನ್ನು ನಿಭಾಯಿಸಿದ್ದು ಶೇಕಡಾ ೧೮ ರಷ್ಟು ಬೆಳವಣಿಗೆ ದಾಖಲಿಸಿದೆ ೨೦೧೮-೧೯ ರ ಪೂರ್ವ ಕೋವಿಡ್ ಪೂರ್ವಕ್ಕೂ ಮುನ್ನ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ದಾಖಲು ಮಾಡಿದೆ ಎಂದು ತಿಳಿಸಲಾಗಿದೆ
೨೦೧೮-೧೯ರಲ್ಲಿ ಭಾರತೀಯ ವಿಮಾನ ಪ್ರಯಾಣ ಸಂಖ್ಯೆಗಳು ಅತ್ಯುತ್ತಮವಾಗಿದ್ದವು. ಸಾಂಕ್ರಾಮಿಕ ರೋಗದ ಸಮಯದಲ್ಲಿ ೨೦೨೦ ರಲ್ಲಿ ಗಣನೀಯವಾಗಿ ಕುಸಿತ ಕಂಡಿತ್ತು. ೨೦೧೯ ರ ಬೇಸಿಗೆಯಲ್ಲಿ ಜೆಟ್ ಏರ್‍ವೇಸ್ ಕಾರ್ಯಾಚರಣೆ ಸ್ಥಗಿತಗೊಳಿಸಿದಾಗ ಭಾರತದ ಪ್ರಯಾಣಿಕರ ಮತ್ತು ವಿಮಾನ ಸಂಚಾರ ಅದಕ್ಕಿಂತ ಒಂದು ವರ್ಷದ ಮೊದಲು ಈಗಾಗಲೇ ಕುಸಿತ ಕಂಡಿದ್ದು ಇದೀಗ ಬೆಳವಣಿಗೆ ಗಗನ ಮುಖಿಯಾಗಿದೆ
೨೦೧೮-೧೯ರಲ್ಲಿ ದೆಹಲಿಯು ಸುಮಾರು ೭ ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದು ೨೦೨೨- ೨೦೨೩ ರಲ್ಲಿ, ೬.೫ ಕೋಟಿ ಪ್ರಯಾಣಿಕರು ದೆಹಲಿಯ ಮೂಲಕ ಹಾದುಹೋಗಿದ್ದರು. ಮಾರ್ಚ್ ೩೧ ರಂದು ವರ್ಷಾಂತ್ಯವಾದಾಗ ೭.೩ ಕೋಟಿ ಮಂದಿ ವಿಮಾನದ ಮೂಲಕ ಸಂಚಾರ ಮಾಡಿದ್ದಾರೆ ಎಂದು ಅಂಕಿ ಅಂಶ ತಿಳಿಸಿದೆ