ಗರಗಪಳ್ಳಿ ಗ್ರಾಮಸ್ಥರಿಂದ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ

ಚಿಂಚೋಳಿ,ಫೆ.12- ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಚಾಲನೆಗೊಂಡ ಸಂವಿಧಾನ ಜಾಗೃತಿ ಜಾಥವು ಜಿಲ್ಲೆಯಾದ್ಯಂತ ಪ್ರತಿ ನಿತ್ಯ ಸಂಚಾರ ಕೈಗೊಂಡಿದ್ದು, ಜಾಥದ ಭವ್ಯಸ್ವಾಗತದ ಜತೆಗೆ ಎಲ್ಲೆಡೆ ಸಂವಿಧಾನಕ್ಕೆ ಜೈಕಾರ ಕೇಳಿಬರುತ್ತಿದೆ.
ಚಿಂಚೋಳಿ ತಾಲೂಕಿನ ಗರಗಪಳ್ಳಿ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ರವಿವಾರ ಗ್ರಾಮದ ಮಹಿಳೆಯರು ಕುಂಭ ಮೇಳ ಹೊತ್ತು, ಆರತಿ ಬೆಳಗಿ ಸಡಗರ ಸಂಭ್ರಮದಿಂದ ಜಾಥಾಕ್ಕೆ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜೈ ಭೀಮ್ ಅವರು ಡಾ. ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದ ಚಿಂಚೋಳಿ ಪಬ್ಲಿಕ್ ಸ್ಕೂಲ್ ಶಿಕ್ಷಕರದ ಮಲ್ಲಿನಾಥ್ ಅವರು ಮಾತನಾಡಿ ಕರ್ನಾಟಕದಲ್ಲಿ
ಎಲ್ಲೆಡೆ ಸಂವಿಧಾನ ಜಾಗೃತಿ ಜಾಥಾ ಮಾಡುತ್ತಿದ್ದು ಎಲ್ಲ ಕಡೆ ಹಬ್ಬದಂತೆ ಸಂವಿಧಾನ ಜಾಗೃತಿ ಜಾಥಾ ರಥ ಸ್ವಾಗತಿಸುತ್ತಿದ್ದೇನೆ ಇಂತಹ ಕಾರ್ಯಕ್ರಮಗಳಿಂದ ಸವಿಧಾನದ ಬಗ್ಗೆ ಎಲ್ಲ ಜನರು ಅರಿತುಕೊಳ್ಳಬೇಕು ಸವಿದಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಒಂದೊಂದು ಸವಿಧಾನ ಹಕ್ಕನ್ನು ನಾವೆಲ್ಲರೂ ತಿಳಿದುಕೊಳ್ಳಬೇಕೆಂದು ಹೇಳಿದರು
ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಭುಲಿಂಗ, ಕೈಗಾರಿಕೆ ಅಧಿಕಾರಿ ನಳಿನಿ, ಕ್ಷೇತ್ರ ಶಿಕ್ಷಣ ಇಲಾಖೆಯ ನಾಗಶೆಟ್ಟಿ ಭದ್ರಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪಾರ್ವತಿ ಗುಂಡಪ್ಪ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸುನಿಲಕುಮಾರ್ ರಟಕಲ, ಮುಖಂಡರಾದ ಗೋಪಾಲರೆಡ್ಡಿ, ಚಂದಾರೆಡ್ಡಿ ನೀಲಕಂಠ ಕೆಕೆ, ನಂದಕುಮಾರ ನಾಯನೊರ, ನಾಗರೆಡ್ಡಿ, ಕೃಷ್ಣರಾಜ, ರೇವಣಸಿದ್ದಯ್ಯಾ ಹೀರೆಮಠ, ಜೈ ಭೀಮ, ಕೆ .ಮಹೇಶ, ಜಗದೇವಿ, ಮತ್ತು ಆನೇಕಲ್ ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು