ಗಮನ ಸೆಳೆದ ಹಿಟ್ಲರ್ ಸಂಭಾಷಣೆ

“ಅಂಡರ್‍ವಲ್ರ್ಡ್‍ನಲ್ಲಿ ಅಣ್ಣ ಅನ್ನಿಸಿಕೊಳ್ಳೋಕೆ ಅಣ್ಣ ಅನ್ನೋನ ಎತ್ತಬೇಕು, ಇಲ್ಲ ಉಳಿಸಬೇಕು’, ‘ಬದುಕಿದ್ರೆ ಭಿಕ್ಷೆ ಬೇಡಿಕೊಂಡು ಬದುಕಬಹುದು. ಅವನ್ನ ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ’, ‘ನಿಯತ್ತು ಇಲ್ದೋನಿಗೆ ನೀತಿ ಹೇಳಿಕೊಡೋದು ಗೂಬೆಗೆ ಸಂಗೀತ ಕಛೇರಿ ನಡೆಸಿದಂತೆ’ …..”

ಪವರ್ ಪುಲ್, ಮತ್ತು ಸಮೂಹವನ್ನು ಆಕರ್ಷಿಸುವ ಸಂಭಾಷಣೆ ಸ್ಟಾರ್ ನಟನ ಸಿನಿಮಾದ ಅಂದುಕೊಂಡರೆ ತಪ್ಪು.. ನವ ನಟ ಲೋಹಿತ್ , ಹಿಟ್ಲರ್ ಚಿತ್ರದಲ್ಲಿ ಹೇಳಿರುವ ಸಂಭಾಷಣೆ ಇದು..

ಸಿನಿಮಾದ ಟ್ರೈಲರ್, ಟೀಸರ್ ಹಾಗು ಹಾಡಿನ ತುಣುಕು ಬಿಡುಗಡೆ ಮಾಡುವುದು ವಾಡಿಕೆ. ಚೊಚ್ಚಲ‌ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಗೀತ ರಚನೆ ಕಾರ ಕಿನ್ನಾಳ್ ರಾಜ್ ನಿರ್ದೇಶಿಸುತ್ತಿರುವ ಚಿತ್ರದ ಡೈಲಾಗ್ ಗಮನ ಸೆಳೆದಿದೆ.

ಬಿಡುಗಡೆಯಾದ ಮೊದಲ‌ದಿನವೇ ಸಾವಿರಾರು ವೀಕ್ಷಣೆ ಕಂಡು ಮೆಚ್ಚುಗೆ ಮಹಾಪೂರ ಹರಿದು ಬಂದಿದ್ದು ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ. ನಾಯಕ ಲೋಹಿತ್, ನಾಯಕಿ ಸಸ್ಯ,ಚಿತ್ರದಲ್ಲಿ ನಟಿಸಿದ್ದಾರೆ ‌.

ಉಳಿದಂತೆ ಬಲರಾಜವಾಡಿ, ವೈಭವ್‍ನಾಗರಾಜ್, ವಿಜಯ್‍ಚಂಡೂರ್, ಶಶಿಕುಮಾರ್, ವೇದಹಾಸನ್, ಗಣೇಶ್‍ರಾವ್ ಕೇಸರ್ ಕರ್ ಮುಂತಾದರಿದ್ದಾರೆ. ಸಂಗೀತ ಆಕಾಶ್‍ಪರ್ವ, ಛಾಯಾಗ್ರಹಣ ಜಿ.ವಿ.ನಾಗರಾಜ್‍ಕಿನ್ನಾಳ, ಸಂಕಲನ ಗಣೇಶ್‍ತೋರಗಲ್, ಸಾಹಸ ಚಂದ್ರುಬಂಡೆ ಅವರದಾಗಿದೆ. ಮಮತಾಲೋಹಿತ್ ನಿರ್ಮಾಣ ಮಾಡಿರುವ ಚಿತ್ರ ಶೀಘ್ರ ಸೆನ್ಸಾರ್ ಅಂಗಳಕ್ಕೆ ತೆರಳಲಿದೆ.