ಗಮನ ಸೆಳೆದ ಶೀರ್ಷಿಕೆ

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಶೀರ್ಷಿಕೆಗಳು ಗಮನ ಸೆಳೆಯುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ “ಅವಳು, ಬದುಕು ಸಮಾಜ, ಪ್ರೀತಿ “ಎಕ್ಸ್ ಎಕ್ಸ್ ಎಕ್ಸ್ ಎಲ್” ಗಮನ ಸೆಳೆಯುತ್ತಿದೆ.

ಚಿತ್ರದ ಪೋಸ್ಟರ್ ಬಿಡುಗಡೆ ವೇಳೆ ಮಾತಿಗಿಳಿದ ನಿರ್ದೇಶಕ ಕಮ್ ನಿರ್ಮಾಪಕ ಸಿ.ಎಚ್ ನಾಯಕ್, ಎಲ್ಲರಿಗೂ ಎಲ್ಲರೂ ಇದ್ದಾರೆ ನನಗ್ಯಾರು ಎಂದು ನಾಯಕ ಪ್ರಶ್ನೆ ಮಾಡ್ತಾ£.É ಸಮುದ್ರ, ಹಿಮಾಲಯ, ಆಕಾಶ ಕಡೆ ನೋಡಿದರೂ ಅವನ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕುಟುಂಬದಲ್ಲಿ ಘಟನೆ ಹೇಗೆ ಕುಟುಂಬ ಹಾಳಾಗುತ್ತದೆ ಎನ್ನುವುದು ಚಿತ್ರ ತಿರುಳು.

ಮುಂದಿನ ತಿಂಗಳು ಚಿತ್ರದ ಮುಹೂರ್ತ ನಡೆಯಲಿದೆ. ಅಲ್ಲಿ ನಾಯಕಿ ಸೇರಿದಂತೆ ಚಿತ್ರದ ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತೇವೆ.ಸÀನಾತನ ಮತ್ತು ಪಾಶ್ಚಿಮಾತ್ತದ ವಿರುದ್ದದ ಹೋರಾಟವೇ ಸಿನಿಮಾ.ಅವಳು, ಬದುಕು ಸಮಾಜ, ಪ್ರೀತಿ,  ಸುತ್ತಾ ಚಿತ್ರ ಸಾಗಲಿದೆ. ಚಿತ್ರವನ್ನು ಕಾಶಿ, ಮಂಗಳೂರು ,ಹುಬ್ಬಳಿ ಧಾರಾವಾಡ, ಬಾಂಬೆ ಬೆಂಗಳೂರು, ಸೇರಿದಂತೆ ವಿವಿಧ ಕಡೆ ಚಿತ್ರೀಕರಣ ಮಾಡಲಿದ್ದು 7 ಭಾಷೆಯಲ್ಲಿ ಮಾಡುತ್ತೇವೆ ಎಂದರು. ಚಿತ್ರಕ್ಕೆ ನಚಿಕೇತ್ ಕ್ಯಾಮರಾ, ಸುಬ್ರಮಣ್ಮ ಆಚಾರ್ ಸಂಗೀತ ನೀಡುತ್ತಿದ್ದು ಪಾಲಾರ್ ಚಿತ್ರದ ಬಳಿಕ ಎರಡನೇ ಸಿನಿಮಾ,  4 ಹಾಡುಗಳಿವೆ ಎನ್ನುವ ಮಾಹಿತಿ ನೀಡಿದರು.