ಗಮನ ಸೆಳೆದ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ

ಬೆಂಗಳೂರು:ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಎಂ.ಸಿ.ಇ.ಸಿ.ಎಚ್.ಎಸ್ ಬಡಾವಣೆ ಯಲ್ಲಿರುವ ಬಚ್ಪನ್ ಪ್ಲೇ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಗಮನಸೆಳೆಯಿತು.
ಮಕ್ಕಳು ಪೋಷಕರ ಸಹಾಯದಿಂದ ತಯಾರಿಸಿದ್ದ ಚಂದ್ರಯಾನ-೩, ಸ್ಮಾರ್ಟ್ ಸಿಟಿ, ಗ್ಲಾಸ್ ಹೌಸ್, ಆಸ್ಪತ್ರೆ, ರೈಲು ಮತ್ತು ವಿಮಾನನಿಲ್ದಾಣ, ಸೋಲಾರ್ ಸಿಸ್ಟಂ, ಸೋಲಾರ್ ಇರಿಗೇಶನ್, ರಾಕೆಟ್, ಫ್ಲೋಟಿಂಗ್ ಹೌಸ್ ಸೇರಿದಂತೆ ೬೦ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ಪೋಷಕರು, ತಮ್ಮ ಮಕ್ಕಳು ರಚಿಸಿದ್ದ ಮಾದರಿಗಳನ್ನು ವೀಕ್ಷಿಸಿ ಖುಷಿಪಟ್ಟರು. ಮಕ್ಕಳು ಮಾದರಿಗಳ ಕುರಿತು ಪೋಷಕರಿಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಶಾಲೆಯ ನಿರ್ದೇಶಕಿ ಎಂ.ಬೀನಾ ಪಾಣ , ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಉತ್ತೇಜಿಸಲು ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆ ಮತ್ತು ಕೌಶಲತೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರಿಂದ ಭವಿಷ್ಯದಲ್ಲಿ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.