ಗಮನ ಸೆಳೆದ ಪೆಪೆ ಟೀಸರ್

ವಿನಯ್ ರಾಜ್ ಕುಮಾರ್ ಅಭಿನಯದ  “ಪೆಪೆ” ಚಿತ್ರ ದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಹುಟ್ಡುಹಬ್ಬದ ಅಂಗವಾಗಿ  ವಿಶೇಷ ಟೀಸರ್ ಇದಾಗಿದ್ದು ವಿನಯ್ ರಾಜ್ ಕುಮಾರ್  ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ.

ಚಿತ್ರದ ಪೋಸ್ಟರ್ ನಲ್ಲಿ ವಿನಯ್ ರಾಜ್ ಕುಮಾರ್ ಮಾಂಸದ ತುಂಡನ್ನು ಆಯುಧವಾಗಿ ಹಿಡಿದುಕೊಂಡು  ನಿಂತಿರುವ ಲುಕ್ ವಿಭಿನ್ನವಾಗಿ ಮೂಡಿ ಬಂದಿದ್ದು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ‘ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಹಳ್ಳಿ ಬ್ಯಾಕ್ ಹಿನ್ನೆಲೆಯಲ್ಲಿ ಮೂಡಿಬಂದಿರುವ ಟೀಸರ್ ಝಲಕ್ ನಲ್ಲಿ ವಿನಯ್ ರಾಜ್ ಕುಮಾರ್, ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ. ಅಂದಹಾಗೇ ಪೆಪೆ ಗ್ಯಾಂಗ್ ಸ್ಟಾರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್ ಕುಮಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನ ಅವತಾರ ತಾಳಿದ್ದಾರೆ.

ಶ್ರೀಲೇಶ್‌ ಎಸ್‌ ನಾಯರ್‌ ಆಕ್ಷನ್ ಕಟ್ ಹೇಳಿರುವ  ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ.

 ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ಉದಯ್ ಶಂಕರ್ ಮತ್ತು ಶ್ರೀರಾಮ್ ಬಿ ಎಮ್ ಕೋಲಾರ್  ನಿರ್ಮಾಣ ಮಾಡಿದ್ದಾರೆ.