
ಕಲಬುರಗಿ,ಏ.29: ಆವಿಷ್ಕಾರವು ಈಗಿನ ಅಗತ್ಯವಾಗಿದೆ. ಭಾರತದಂತಹ ದೇಶಕ್ಕೆ ಸಾಮಾಜಿಕವಾಗಿ ಪ್ರಸ್ತುತವಾದ ಆವಿಷ್ಕಾರಗಳು ಗಮನಾರ್ಹ ಬದಲಾವಣೆಯನ್ನು ತರುತ್ತವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಅಂಕುರ್ ಫೆಸ್ಟ್ 2023ರ ಅಂಗವಾಗಿ ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಆಯೋಜಿಸಿದ್ದ ಇನ್ನೋವೇಶನ್ ಫೆಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಸಂಶೋಧನೆ ಮತ್ತು ಇಂಧನ ತಂತ್ರಜ್ಞಾನ ಕ್ಷೇತ್ರದಲ್ಲಿನ ನಮ್ಮ ಆವಿಷ್ಕಾರಗಳು ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಹೆಚ್ಚಿಸಿವೆ ಎಂದರು.
ದೇಶದ ನಾವೀನ್ಯತೆ ಸಂಸ್ಕøತಿಯು ಭಾರತವನ್ನು ವಿಶ್ವದ ಅತ್ಯಂತ ನವೀನ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿದೆ ಮತ್ತು ನಾವು ಅನೇಕ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ಇಂದು ಬೆಂಗಳೂರು ವಿಶ್ವದ ಎರಡನೇ ಅತ್ಯಂತ ನವೀನ ನಗರವಾಗಿದೆ ಮತ್ತು ಇದು ಅನೇಕ ವಿಶ್ವ ಪ್ರಸಿದ್ಧ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳನ್ನು ಹೊಂದಿದೆ. ನಮ್ಮ ಯುವ ಪೀಳಿಗೆಯು ನವೀನವಾಗಿ ಯೋಚಿಸಬೇಕು ಮತ್ತು ಇಂಧನ ದಕ್ಷತೆ, ನೀರಿನ ಕೊರತೆ, ಮಾಲಿನ್ಯ ಮುಕ್ತ ಸಾರಿಗೆ, ಕೈಗೆಟಕುವ ದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಮುಂತಾದ ಜ್ವಲಂತ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ. ಬಸವರಾಜ್ ಡೋಣೂರ್ ಅವರು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮೀರಿ ಸಾಹಿತ್ಯ ಮತ್ತು ಸಾಮಾಜಿಕ ತತ್ತ್ವಶಾಸ್ತ್ರದಲ್ಲಿ ಹೊಸತನದ ಅಗತ್ಯವಿದೆ. ಈ ಆವಿಷ್ಕಾರವು ಚಿಂತನೆಯ ಪ್ರಕ್ರಿಯೆಯಲ್ಲಿ ಬದಲಾವಣೆ ಮತ್ತು ಸಮಾಜಕ್ಕೆ ಹೊಸ ಆಯಾಮವನ್ನು ತರುತ್ತದೆ ಎಂದರು.
ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ .ಆರ್.ಎಸ್. ಹೆಗಡೆ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವ ಮನಸ್ಸುಗಳಿಗೆ ಉತ್ತೇಜನ ನೀಡುತ್ತವೆ ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತವೆ. ಈಗ ಸರ್ಕಾರಗಳು ಅಟಲ್ ಇನ್‍ಕ್ಯುಬೇಷನ್, ಎಲಿವೇಟ್ ಕರ್ನಾಟಕ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ನಾವೀನ್ಯತೆಯನ್ನು ಪೆÇೀಷಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ. ರಾಜೀವ್ ಜೋಶಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ಸಂಶೋಧನಾ ದೃಷ್ಟಿಕೋನವನ್ನು ಬೆಳೆಸುವುದು ನಾವೀನ್ಯತೆ ಉತ್ಸವದ ಉದ್ದೇಶವಾಗಿದೆ. ಉತ್ಸವವು ಮಾನವಿಕತೆ ಮತ್ತು ಭಾμÉಗಳು, ಕೃಷಿ, ಔಷಧ ಮತ್ತು ಜೀವಶಾಸ್ತ್ರ, ತಂತ್ರಜ್ಞಾನ, ಶುದ್ಧ ವಿಜ್ಞಾನ, ಮಾಧ್ಯಮ ಮತ್ತು ಸಾಮಾಜಿಕ ವಿಜ್ಞಾನಗಳಂತಹ ಆರು ವರ್ಗಗಳಿಗೆ ಸೇರಿದ 29 ವಿಭಿನ್ನ ಸಾಮಾಜಿಕ ಸಂಬಂಧಿತ ಆವಿಷ್ಕಾರಗಳನ್ನು ಪ್ರದರ್ಶಿಸಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.