ಗಮನಸೆಳೆದ ಸಹಕಾರಿ ಕೃಷಿ ಮೇಳ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.17 ಪಟ್ಟಣದ ಹಳೆವೂರು ಸಮುದಾಯ ಭವನದಲ್ಲಿ ನಡೆದ ಪಿ ಎಲ್ ಡಿ ಬ್ಯಾಂಕ್ ವಾರ್ಷಿಕೋತ್ಸವ ಮಹಾಜನ ಸಭೆಯಲ್ಲಿ ಸಹಕಾರಿ ಕೃಷಿ ಮೇಳ ಜರುಗಿತು.
ಕೃಷಿ ಮೇಳಕ್ಕೆ ನಂದೀಪುರ ಡಾ. ಮಹೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ನಾನಾ ಕಂಪನಿಯ  ಹಲವು ಬಗೆಯ ಟ್ಯಾಕ್ಟರ್ ಗಳು ಕೃಷಿ ಯಂತ್ರೋಪಕರಣಗಳು ದ್ವಿಚಕ್ರವಾಹನಗಳು ಸಿರಿಧಾನ್ಯ ಪ್ರದರ್ಶನ ರಸಗೊಬ್ಬರ ಕ್ರಿಮಿನಾಶಕ, ಕೀಟನಾಶಕ ಪ್ರದರ್ಶನ ವಿಶೇಷ ಆಕರ್ಷಣೆ ಕೂಡಿತ್ತು.ನೂರಾರು ರೈತರು ವೀಕ್ಷಿಸಿ ಮಾಹಿತಿ ಪಡೆದರು.