ಗಮನಸೆಳೆದ ಗಣಿತದ ಮಾದರಿಗಳು

ಹರಪನಹಳ್ಳಿ.ಸೆ.೮ : ತಾಲ್ಲೂಕಿನ ಅರಸೀಕೆರೆ ಗ್ರಾಮದ ಶಾಂತ ಪ್ರಕಾಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ಪ್ರವೇಶ, ಕಲಿಕಾ ಮೇಳ ಹಾಗೂ ಪೋಷಣ ಮಾಸಾಚಾರಣೆ ಆಯೋಜಿಸಲಾಗಿತ್ತು.ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ, ತಂತ್ರಜ್ಞಾನ, ಗಣಿತದ ಮಾದರಿಗಳು ಗಮನ ಸೆಳೆದವು.ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕು ಎಂದರು.ಬಿಇಒ ಬಸವರಾಜಪ್ಪ ಮಾತ ನಾಡಿ, ಶಿಕ್ಷಕರೊಂದಿಗೆ ಚರ್ಚಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕಬೀರ್ ನಾಯ್ಕ್, ವಲಯ ಸಂಪನ್ಮೂಲ ಅಧಿಕಾರಿ ಅಣ್ಣಪ್ಪ, ಸಿದ್ದೇಶ್ವರ್, ಶಿಕ್ಷಕ ಅರ್ಜುನ್ ಪರಸಪ್ಪ, ಶಾಂತ ಕುಮಾರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ, ಅಧ್ಯಕ್ಷ ಮಲ್ಲಿಕಾರ್ಜುನ್, ವಿಶಾಲಾಕ್ಷಮ್ಮ, ವೈ.ಡಿ ಲಕ್ಷ್ಮೀದೇವಿ, ಕುಬ್ಯಾನಾಯ್ಕ, ಬಂದಮ್ಮ ಇದ್ದರು.