ಗಬ್ಬೆದ್ದು ನಾರುತ್ತಿರುವ ಸರಕಾರಿ ಪಬ್ಲಿಕ ಶಾಲೆ

ಕರಜಗಿ:ಜು.6: ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸರಕಾರಿ ಪಬ್ಲಿಕ ಶಾಲೆಯ ಎದುರುಗಡೆ ಗಡಸಿನಿಂದ ದುರ್ವಾಸನೆ ಹೊಡೆಯುತ್ತಿದೆ ಇದರಿಂದ ಮಕ್ಕಳಲ್ಲಿ ರೋಗದ ಭೀತಿ ಉಂಟಾಗುತ್ತಿದೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತುಕೊಂಡು ವಿದ್ಯಾಭ್ಯಾಸ ಮಾಡಬೇಕಾದರೆ ಮಕ್ಕಳಲ್ಲಿ ದುರ್ವಾಸನೆ ತೆಗೆದುಕೊಂಡು ವಿದ್ಯಾಭ್ಯಾಸ ಮಾಡಬೇಕಾದಂತ ಪರಸ್ಥಿತಿ ಎದುರಾಗುತ್ತಿದೆ ವಿದ್ಯಾಭ್ಯಾಸದ ಕಡೆ ಗಮನ ಹೋಗುತ್ತಿಲ್ಲ ಗ್ರಾಮ ಪಂಚಾಯತಿಯಲ್ಲಿ ಒಣಕಸ ಮತ್ತು ಹಸಿ ಕಸವನ್ನು ವಿಲೇಮಾರಿ ಮಾಡಲು ವಾಹನದ ವ್ಯವಸ್ಥೆ ಇದ್ದರೂ ಕೂಡ ಕೇವಲ ಹೆಸರಿಗೆ ಮಾತ್ರ ವಾಹನದ ವೆವಸ್ಥೆ ಇದೆ ಅದರಿಂದ ಯಾವ ರೀತಿಯು ಉಪಯೋಗ ಆಗುತ್ತಿಲ್ಲ ಶಾಲೆಯ ಎದುರುಗಡೆ ಗಡಸು ಹಲವು ತಿಂಗಳಾದರೂ ಕೂಡ ಗಡಸು ರಸ್ತೆ ಮೇಲೆ ಮೆರೆಯುತ್ತಿದೆ ಮತ್ತು ಮಳೆ ತುಂತುರು ಮಳೆಯಿಂದಾಗಿ ರಸ್ತೆಯ ಮೇಲೆ ಗಡಸು ಮತ್ತಷ್ಟು ದುರ್ವಾಸನ ಹೊಡೆಯುತ್ತಿದೆ ಇದರಿಂದ ಮಕ್ಕಳಿಗೆ ಬಹಳ ರೋಗದ ರುಜುಣುಗಳು ಹರಡುತ್ತಿವೆ

ಸರಕಾರಿ ಪಬ್ಲಿಕ ಶಾಲೆಯ ಎದುರುಗಡೆ ಸುಮಾರು ತಿಂಗನಿಂದ ಗಡಸು ಇದೆ ನಾವು ಗ್ರಾಮ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದರು ಕೂಡಾ ಗಮನ ಹರಿಸುತಿಲ್ಲ ದಯವಿಟ್ಟು ಶಾಲೆಯ ಎದುರುಗಡೆ ಇರುವ ಗಡಸು ಎರಡು ದಿನಗಳಲ್ಲಿ ಸೋಚ್ಛತೆಯಾಗದಿದ್ದರೆ ನಾವು ಗ್ರಾಮ ಪಂಚಾಯತಿ ಎದುರುಗಡೆ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡುತಿದ್ದೇವೆ,

ಕ ರ ವೇ ಅಧ್ಯಕ್ಷ ಕರಜಗಿ ಮಂಜುನಾಥ್ ನೈಕೋಡಿ