ಗಬ್ಬೂರು ಪಿಎಸ್‌ಐ ಅಮಾನತಿಗೆ ಒತ್ತಾಯಿಸಿ ಮನವಿ

ರಾಯಚೂರು,ನ.೨೪- ದೇವದುರ್ಗ ತಾಲೂಕಿನ ಗಬ್ಬೂರು ಪಿಎಸ್‌ಐ ಸಣ್ಣ ವೀರೇಶ್ ಅವರನ್ನು ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದೇವದುರ್ಗ ತಾಲೂಕಿನ ಗಬ್ಬರು ಹೋಬಳಿಯಲ್ಲಿ ಹಗಲು ರಾತ್ರಿಯನ್ನದೆ ಅಕ್ರಮ ಚಟುವಟಿಕೆಗಳಾದ ಮ , ಜುಜಾಟ , ಅಕ್ರಮ ಮದ್ಯ ಮಾರಟ ಅಕ್ರಮ ಮರಳು ಸಾಗಣಿಕೆ ನಡೆದಾಗ ಅದನ್ನು ಪ್ರಶ್ನೆ ಮಾಡುವ ಸಂಘಟನೆಗಾರರ ಮೇಲೆ ದರ್ಪ ದೌರ್ಜನ್ಯದ ಮಾತುಗಳನ್ನಾಡುತಿದ್ದು ನೋಡಿದರೆ ಪಿ.ಎಸ್.ಐ ಸಣ್ಣ ವಿರೇಶ ಅವರು ನೇರವಾಗಿ ಸಾಥ್ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕಾನೂನಿನ ಚೌಕಟ್ಟನ್ನು ಗಾಳಿಗೆ ತೂರಿ ಅಕ್ರಮ ದಂದೆ ನಡೆಸುವವರ ಪರವಾಗಿ ನಿಂತಿದ್ದಾರೆ.
ತಿಂಗಳು ೪ ನೇ ಬಾನುವಾರ ದಲಿತರ ಸಭೆಗಳನ್ನು ನಡೆಸುತ್ತಿಲ್ಲ, ಪ್ರತಿ ಹಳ್ಳಿಗಳಿಗೆ ಬೀಟ್ ಪೋಲಿಸರನ್ನು ಕಳುಹಿಸದೆ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಾರೆ.ಅಕ್ರಮ ಚಟುವಟಿಕೆಗಳ ಬಗ್ಗೆ ಮಾತನಾಡಿದರೆ ಸಂಘಟೆಗಾರರನ್ನು ಭಯೊತ್ಪಾದಕರಂತೆ ಕಂಡು ಅವುಗಳನ್ನು ಕೇಳಲು ನೀವ್ಯಾರು ? ನಿಮಗೆ ಏಕೆ ಬೇಕು? ನಿಮ್ಮ ಮೇಲೆ ಸುಳ್ಳು ದೂರು ದಾಖಲಿಸಬೇಕಾಗುತ್ತದೆ ಎಂದು ಸಂಘಟನೆಗಾರರಿಗು ಹಾಗೂ ಸಾರ್ವಜನಿಕರಿಗು ಗದರಿಕೆಯಿಂದ ದರ್ಪದ ಮಾತುಗಳನ್ನಾಡುತ್ತಾರೆ.ಆದ್ದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಟ್ಟೂರು ಹೋಬಳಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಕೂಡಲೇ ಪಿ.ಎಸ್.ಐ ಸಣ್ಣ ವಿರೇಶ ಅವರನ್ನು ಅಮಾನುತು ಗೊಳಿಸಬೇಕು . ಒಂದುವೇಳೆ ನಿರ್ಲಕ್ಷ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾರೆಪ್ಪ ಮಲದಕಲ್,ಜಾಕೋಬ್ ಟೇಲರ್ ಬೊಮ್ಮ ನಾಳ,ಬಸವಲಿಂಗಪ್ಪ ಖಾನಾಪುರ,ನರಸಪ್ಪ ಎನ್, ಗಣೇಕಲ್, ತುಕಾರಾಮ್ ,ಬಸಲಿಂಗ ಸೇರಿದಂತೆ ಇತರರು ಉಪಸ್ಥಿತರಿದ್ದರು