ಗಬ್ಬೂರಿನಲ್ಲಿ ಮಾದಿಗ ಮೀಸಲಾತಿ ಮುಖಂಡರಿಂದ ಪ್ರತಿಭಟನೆ

ಗಬ್ಬೂರು:-ಸಮೀಪದ ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೆನಗುದಿಗೆ ಬಿದ್ದ ಕಾಮಗಾರಿಗಳು ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಶುಕ್ರವಾರ ಗಬ್ಬೂರಿನಲ್ಲಿ ತಾಲ್ಲೂಕು ಮಾದಿಗ ಮೀಸಲಾತಿ ಮುಖಂಡರಿಂದ ಪ್ರತಿಭಟನೆ ಮಾಡುವ ಮೂಲಕ ತಹಶಿಲ್ದಾರರ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ದೇಶ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಿದರು ಕೂಡಾ, ಇನ್ನೂ ಹಳ್ಳಿಗಳು ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿವೆ.
ಖಾನಾಪೂರ ಗ್ರಾಮದಲ್ಲಿ ೧ರಿಂದ೮ ನೇ ತರಗತಿವರೆಗೆ ಶಾಲೆ ಇದ್ದು ೩೦೦ ರಿಂದ ೪೦೦ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂಲ ಸೌಕರ್ಯದಿಂದ ವಂಚಿತಗೊಂಡಿದೆ.
ಶಾಲೆಯ ಪಕ್ಕದಲ್ಲಿ ಮುಖ್ಯರಸ್ತೆ ಇದ್ದು, ವಾಹನಗಳ ಸಂಚಾರದಿಂದ ಮಕ್ಕಳ ಕಲಿಕೆಗೆ ತುಂಬಾ ತೊಂದರೆಯಾಗಿದೆ.ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು.
ಊರಿನ ಹಿರಿಯರು ಶಾಲಾ ಶಿಕ್ಷಕರು ಹಲವಾರು ವರ್ಷಗಳಿಂದ ಸರ್ವೆ ನಂಬರ್ ೨೭೫, ೩ ಎಕರೆ ೩ ಗುಂಟೆ ಮತ್ತು ೨೭೧ ರಲ್ಲಿ ೧೬ ಗುಂಟೆ ಒಟ್ಟು ೩ ಎಕರೆ ೧೯ ಗುಂಟೆ ಸರಕಾರಿ ಜಮೀನಿನಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲಾಯನ್ನಾಗಿ ಮೇಲ್ದರ್ಜೆಗೇರಿಸಿ ಮಂಜೂರು ಮಾಡಬೇಕು.
ಮೂಲಭೂತ ಸೌಕರ್ಯಗಳು ಹಾಗೂ ಕನಿಷ್ಠ ರುದ್ರಭೂಮಿಯಂತ ಸವಲತ್ತುಗಳಿಂದ ವಂಚಿರಾಗಿದ್ದಾರೆ.
ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಹಲವಾರು ಬೇಡಿಕೆಗಳು ಈಡೇರಿಸಬೇಕು ಎಂದು ತಾಲ್ಲೂಕು ಮಾದಿಗ ಮೀಸಲಾತಿ ಮುಖಂಡರು ತಹಶಿಲ್ದಾರರಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ದೇವದುರ್ಗ ತಾಲ್ಲೂಕು ಮಾದಿಗ ಮೀಸಲಾತಿ ಮುಖಂಡರಾದ ರಾಜಪ್ಪ ಸಿರವಾರಕರ್, ಮರೇಪ್ಪ ಮಲದಕಲ್, ಶಾಂತಕುಮಾರ, ಜಾಕೋಬ್, ನರಸಪ್ಪ, ಬಸವಲಿಂಗಪ್ಪ, ತುಕರಾಮ,ಮಲ್ಲಯ್ಯ, ಮಾರ್ತಾಂಡ, ಮುತ್ತುರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.