ಗಬ್ಬೂರಿನಲ್ಲಿ ಬಿಎಸ್‌ಎಫ್ ಯೋಧರ ಪಥಸಂಚಲನ

ಗಬ್ಬೂರು,ಏ.೦೯-ದೇವದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಯು ಸೂಸುತ್ರವಾಗಿ ನಡೆಯಲು ತಾಲೂಕು ಆಡಳಿತ ಸಜ್ಜುಗೊಂಡಿದ್ದು, ಗಬ್ಬೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಎಸ್‌ಎಫ್ ಯೋಧರು ಪಡೆಯಿಂದ ಪಂಥಸಂಚಲನವನ್ನು ನಡೆಸಲಾಯಿತು.
ದೇವದುರ್ಗ ತಾಲೂಕಿನ ೨೬೫ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದ್ದು,ಅಲ್ಲಿ ನಡೆಯುವ ಚುನಾವಣೆಯು ಶಾಂತಿಯುತವಾಗಿರಲಿ ಎಂಬ ಉದ್ದೇಶದಿಂದ ೧೦೦ಕ್ಕೂ ಹೆಚ್ಚು ಯೋಧರು ೨೦ ಕ್ಕೂ ಹೆಚ್ಚು ಪೋಲಿಸ್ ಅಧಿಕಾರಿಗಳು ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.
ಯುವಕರು ಸೈನಿಕರಿಗೆ ಹೂವಿನ ಮಳೆಗರೆಯುವ ಮೂಲಕ ಬರ ಮಾಡಿಕೊಂಡರು.