
ಗಬ್ಬೂರು,ಮಾ.೧೭- ವಿವಿಧ ಅಭಿವೃದ್ಧಿ ಕಾಮಗಾರಿಳ ಶುಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ದೇವದುರ್ಗ ತಾಲೂಕಿನ ಐತಿಹಾಸಿಕ ಗಬ್ಬೂರು ಪಟ್ಟಣಕ್ಕೆ ದಿ:೨೪ಕ್ಕೆ ದೇಶದ ರಾಜಕೀಯ ಚಾಣಕ್ಯ ಹಾಗೂ ಕೇಂದ್ರ ಗೃಹ ಸಹಕಾರ ಸಚಿವರಾದ ಅಮಿತ್ ಶಾ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ, ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ದಿ-೨೪ ರಂದು ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾದ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ವರಿಷ್ಠಧಿಕಾರಿಯಾದ ನಿಖಿಲ್ ಬಿ.ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಶಶಿಧರ್ ಕುರೇರ್ ದೇವದುರ್ಗ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಶಿವನಗೌಡ ನಾಯಕ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬ ಸ್ವಾಮಿಗಳು, ಹಿರಿಯ ಮುಖಂಡರಾದ ಕೊರವಿ ಶರಣಪ್ಪಗೌಡ ಗಬ್ಬೂರು, ಸಂಗನಗೌಡ ಮದರಕಲ್, ಶಿವು ಸಾಹುಕಾರ್ ಗಬ್ಬೂರು, ಶೀತಕಾಂತ ಗುಡಿ, ತಾಯೆಜ್ ಕುಮಾರ ರಾಮದುರ್ಗ, ಕೆಡಿಪಿ ಸದಸ್ಯರಾದ ಮಸ್ತಾನಿ ನಾಯಕ ಖಾನಾಪೂರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.