ಗನ್ ಮ್ಯಾನ್ ನಿಂದ ಅಕ್ರಮ ಶೆಡ್ ನಿರ್ಮಾಣ:ಆರೋಪ

ಕೊಟ್ಟೂರು ಏ ೩: ತಾಲೂಕಿನ ಹ್ಯಾಳ್ಯ ಗ್ರಾಮದ ಹಳೆ ಊರಿನ ಸಾರ್ವಜನಿಕ ಸ್ಥಳದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗನ್ ಮ್ಯಾನ್ ಸ್ವಗ್ರಾಮ ಹ್ಯಾಳ್ಯದಲ್ಲಿ ಬೆಳದರಿ ಪ್ರಕಾಶ್ ಹಾಗೂ ಸಹೊದರರು ಅಧಿಕಾರ ದುರುಪಯೋಗ ಮಾಡಿ ಕೊಂಡು ಅಕ್ರಮವಾಗಿ ಶೆಡ್ ನಿರ್ಮಾಣಮಾಡಿದ್ದು ಇದನ್ನು ತೆರವು ಮಾಡುವಂತೆ ಗ್ರಾಮದ ನಾಗರಾಜ, ವೀರಭದ್ರಪ್ಪ,
ಬಸವರಾಜಪ್ಪ ಸೇರಿದಂತೆ ಅನೇಕ ರು ಹ್ಯಾಳ್ಯ ಗ್ರಾಮ ಪಂಚಯಿತಿಗೆ ದೂರು ನೀಡಿದ್ದಾರೆ.ದೂರಿನ ಅನ್ವಯ ಅಭಿವೃದ್ಧಿ ಅಧಿಕಾರಿ ಶಶಿಧರ ಹಾಗೂ ಜನಪ್ರತಿನಿಧಿಗಳು ಸ್ಥಳಪರಿಶೀಲನೆ ಮಾಡಿದ್ದಾರೆ.ಸೂಕ್ತ ದಾಖಲೆ ಇದ್ದರೆ ನೀಡಿ ಎಂದರು ದಾಖಲೆ ನೀಡಿಲ್ಲ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪಿಡಿಒ ಶಶಿಧರ ತಿಳಿಸಿದ್ದಾರೆ.