ಗದ್ಧರ್‌ಗೆ ಶ್ರದ್ಧಾಂಜಲಿ

ಕೋಲಾರ,ಆ.೮- ಅಗಲಿದ ಜನರ ಧ್ವನಿ, ಗದ್ಧರ್ ಅವರಿಗೆ ನಗರದ ಮೆಕ್ಕೆ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾನ ಮನಸ್ಕರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಕ್ರಾಂತಿಕಾರಿ ಕವಿ, ಹಾಡುಗಾರ ಮತ್ತು ಹೋರಾಟಗಾರ ಗದ್ಧರ್ ಅವರು ಭಾನುವಾರ ಅನಾರೋಗ್ಯದಿಂದ ಹೈದರಾಬಾದ್ ಅಮೀರ್ ಪೇಟೆಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದ್ದರು. ಶೋಷಣೆ, ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ, ಸಮಾಜವನ್ನು ಕಟ್ಟಲು ಗದ್ಧರ್ ಅವರ ಹಾಡುಗಳು ಜನರನ್ನು ಆಕರ್ಷಿಸುತ್ತಿದ್ದವು. ತಮ್ಮ ಹಾಡುಗಳ ಮುಖಾಂತರವೇ ಲಕ್ಷಾಂತರ ಜನರನ್ನು ಕ್ರಾಂತಿಕಾರಿ ಚಳುವಳಿಯಲ್ಲಿ ತೊಡಗಿಸಿಕೊಳ್ಳುವಂತೆ ಸ್ಪೂರ್ತಿಯನ್ನು ನೀಡುತ್ತಿದ್ದವು.
ಗದ್ದರ್ ಎಂದರೆ ಆಳುವವರಿಗೆ ಒಂದು ರೀತಿಯಲ್ಲಿ ನಡುಕ ಸೃಷ್ಟಿಸಿದರೆ, ಶೋಷಿತ ಜನರಿಗೆ ಧೈರ್ಯವಾಗಿತ್ತು. ಇಂತಹ ಮಹಾನ್ ವ್ಯಕ್ತಿ ನಮ್ಮನು ದೈಹಿಕವಾಗಿ ಅಗಲಿದ್ದರೂ, ಸಾಹಿತ್ಯದ ಮೂಲಕ, ಹೋರಾಟಗಳ ಮೂಲಕ ಮುಂದೆಯೂ ಜನತೆಗೆ ಸ್ಪೂರ್ತಿಯಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಟಿ. ಸುಬ್ರಹ್ಮಣಿ, ಕಲ್ಲೂರು ಚಲಪತಿ, ಡಿಕ್ಕಿ ನಾರಾಯಣಸ್ವಾಮಿ, ಹಾಡುಗಾರ ವೆಂಕಟಾಚಲಪತಿ, ಅಂಬರೀಷ್ ವಿ, ಅಮರ್, ಪುಷ್ಪಾಲತಾ, ಸಿವಿ ನಾಗರಾಜ್, ಸತೀಶ್ ಎಸ್, ಭೀಮರಾಜ್, ನಿವೃತ್ತ ಸೈನಿಕ ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು.