ಗದ್ದೆಗಳಲ್ಲಿ ನಳನಳಿಸುವ ಸಸಿಮಡಿ”

ಹಿರೇಕೋಗಲೂರು.ಡಿ.೨೬; ಬೇಸಿಗೆ ಹಂಗಾಮಿನ  ಭತ್ತದ  ನಾಟಿಗಾಗಿ ನೀರಿನ ಸೌಲಭ್ಯ ಉಳ್ಳ ರೈತರು ಅತ್ತ ಭತ್ತದ ಕಟಾವು ಮುಗಿಯುತ್ತಿದ್ದಂತೆ ಇತ್ತ ಬೇಸಿಗೆ ಹಂಗಾಮಿನ  ಭತ್ತದ ನಾಟಿಗಾಗಿ ಭತ್ತದ ಬೀಜ ಚೆಲ್ಲಿ ನಾಲೆಯಲ್ಲಿ ನೀರು ಹರಿಸುವ ಮೊದಲೇ ಸಸಿಮಡಿ ಬೆಳೆಸಿಕೊಂಡು ಮುಂಚಿತವಾಗಿ ಭತ್ತದ ನಾಟಿಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಪಕ್ಕದ ಗಿರಿಯಾಪುರ, ಕೆಂಪನಹಳ್ಳಿ- ವೆಂಕಟೇಶ್ವರ ಪುರಂ, ಈರಗನಹಳ್ಳಿ  ಮುಂತಾದಕಡೆಗಳಲ್ಲಿ ಬಹುತೇಕ ಗದ್ದೆಗಳಲ್ಲಿ ಭತ್ತದ ಸಸಿಮಡಿಗಳು ನಳನಳಿಸುತ್ತಿರುವುದು ಕಂಡುಬರುತ್ತಿದೆ,         ಕೆಲವರು ಚಳಿಗಾಲಕ್ಕೆ ಬೀಜ ಬೇಗ ಮೊಳಕೆ ಬರುವುದಿಲ್ಲ ಮತ್ತು ಸಸಿಗಳ ಬೆಳವಣಿಗೆ ಶ್ರೇಷ್ಠವಾಗಿ ಬರುವುದಿಲ್ಲವೆಂಬ ಕಾರಣಕ್ಕಾಗಿ ಕಾದುನೋಡುವ ತಂತ್ರದಲ್ಲಿದ್ದರೆ ಕೆಲವರು  ಮುಂಗಾರು ಮಳೆ ಗಾಳಿಗೆ  ಮೊದಲೇ ಕೊಯ್ಲು ಮುಗಿಸಿ  ಹುಲ್ಲು ಬಚಾವ್ ಮಾಡಿಕೊಂಡು ಮುಂಚಿತವಾಗಿ ಉತ್ತಮ ದರಕ್ಕೆ ಭತ್ತಮಾರಾಟ ಮಾಡಿ ನೆಮ್ಮದಿ ಯಾಗಿರಲು ಹವಣಿಕೆ ನಡೆಸಿದ್ದಾರೆ, ಈ ವರ್ಷ ಚಳಿ ಹೆಚ್ಚಾಗಿದ್ದರೂ ಸಹ ಸಸಿಮಡಿಗಳ ಬೆಳವಣಿಗೆ ಮಾತ್ರ ಮುಂಗಾರು ಹಂಗಾಮಿನಲ್ಲಿ ಸಸಿ ಬೆಳೆದಂತೆ ಕಂಡುಬರುತ್ತಿವೆ ಬೆಳೆಗಾರರು ಸಸಿಮಡಿಗಳನ್ನು ನೊಡಿ ನಗೆ ಬೀರುತ್ತಿದ್ದಾರೆ.ಪಕ್ಕದ ಗಿರಿಯಾಪುರ, ಕೆಂಪನಹಳ್ಳಿ-ವೆಂಕಟೇಶ್ವರ ಪುರಂ, ಈರಗನಹಳ್ಳಿಯ ಬಹುತೇಕ ಗದ್ದೆಗಳಲ್ಲಿ ಬೇಸಿಗೆ ಹಂಗಾಮಿನ ಭತ್ತದ ನಾಟಿಗಾಗಿ ಬೆಳೆಸಿರುವ ಸಸಿಮಡಿ ಕೊರೆಯುವ ಚಳಿಯಲ್ಲೂ ಒಳ್ಳೆಯ ಬೆಳವಣಿಗೆಯಿಂದ ನಳನಳಿ ಸುತ್ತಿದೆ.